janadhvani

Kannada Online News Paper

ವೀಸಾ ಕಾಲಾವಧಿ ಮುಗಿದವರಿಗೆ ಮತ್ತೆ ಮೂರು ತಿಂಗಳ ವಿಸ್ತರಣೆ

ಕುವೈತ್ ಸಿಟಿ :ದೇಶದಲ್ಲಿ ವೀಸಾ ಕಾಲಾವಧಿ ಮುಕ್ತಾಯಗೊಂಡವರಿಗೆ ಮತ್ತೆ ಮೂರು ತಿಂಗಳ ಅವಧಿಯನ್ನು ವಿಸ್ತರಿಸಲಾಗಿದೆ. ಮೇ 31 ರಂದು ಅವಧಿ ಮುಗಿದವರಿಗೆ ಸಾಮಾನ್ಯ ವಾಗಿ ವಿಸ್ತರಿಸಲಾಗಿದೆ.ಕೋವಿಡ್ ನಿಯಂತ್ರಣದ ಭಾಗವಾಗಿ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾದ ಕಾರಣದಿಂದಾಗಿ ವೀಸಾವನ್ನು ವಿಸ್ತರಿಸಲಾಗಿದೆ.ಗೃಹ ಸಚಿವರಾದ  ಅನಸ್ ಅಸ್ವಾಲಿಹ್ ಈ ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ಕುವೈತ್‌ನಲ್ಲಿರುವ ವೀಸಾ ಅವಧಿ ಮುಗಿದವರಿಗೆ ವಿಶೇಷ ಅರ್ಜಿ ಸಲ್ಲಿಸದೆ ವೀಸಾ ಕಾಲಾವಧಿ ವಿಸ್ತರಣೆಯಾಗಲಿದೆ. ಸಂದರ್ಶಕ ವೀಸಾದಲ್ಲಿರುವವರಿಗೂ ಈ ವಿನಾಯ್ತಿ ಲಭಿಸಲಿದೆ. ಈ ಹಿಂದೆ ಮಾರ್ಚ್ ಒಂದರಿಂದ ಮೂರು ತಿಂಗಳು ವೀಸಾ ವಿಸ್ತರಿಸಿ ನೀಡಲಾಗಿತ್ತು. ಹೊಸ ನಿರ್ದೇಶನದಲ್ಲಿ ಹೆಚ್ಚುವರಿ ಮೂರು ತಿಂಗಳು ವಿಸ್ತರಿಸಿ ನೀಡಲಾಗಿದೆ.

ಕೋವಿಡ್ ಹರಡುವಿಕೆಯ ಹಿನ್ನೆಲೆಯಲ್ಲಿ ವಿಮಾನಯಾನ ಸ್ಥಗಿತಗೊಂಡಿರುವ ಕಾರಣ ಸಂದರ್ಶಕ ವೀಸಾದಲ್ಲಿ ಆಗಮಿಸಿದ ಹಲವಾರು ಮಂದಿಯಾ ಯಾತ್ರೆ ಮೊಟಕುಗೊಂಡಿದೆ.ವೀಸಾ ಅವಧಿ ಮುಗಿದ ನಂತರ ಪ್ರತಿದಿನ ದಂಡ ಪಾವತಿಸ ಬೇಕಾದೀತು ಎಂಬ ಆತಂಕದಲ್ಲಿದ್ದವರಿಗೆ,ಗೃಹ ಸಚಿವಾಲಯದ ಹೊಸ ನಿರ್ಧಾರವು ನೆಮ್ಮದಿ ನೀಡಿದೆ.

error: Content is protected !! Not allowed copy content from janadhvani.com