janadhvani

Kannada Online News Paper

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಆಶ್ರಯದಲ್ಲಿ ವಿವಾಹ ಸಹಾಯ

ಕೊಡಗು ಸುನ್ನಿ ವೆಲ್ಫೇರ್ ಅಸೋಷಿಯೇಷನ್ (KSWA)  ಅನಿವಾಸಿ ಕೊಡಗಿನ ಸಹೃದಯಿ ಬಂದುಗಳಿಂದ ಜಿಲ್ಲೆಯ ಶೋಷಿತರ ಆಶಾ ಕೇಂದ್ರವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅವರನ್ನು ಮುಂದೆ ತರಲು ವಿದೇಶದಿಂದ ಕೈ ಜೋಡಿಸಿ, ಸಾಂತ್ವನ ಕಾರ್ಯಕ್ರಮಗಳ ಮೂಲಕ ಸಂಕಷ್ಟ ಗಳಿಗೆ ಸ್ಪಂದಿಸಲು ಯುಎಇ ಕೇಂದ್ರವಾಗಿ ಕಳೆದೆರಡು ದಶಕಳಿಂದ ಕಾರ್ಯಾಚರಿಸುತ್ತಿರುವ ಸಂಘಟನೆಯಾಗಿದೆ KSWA. ಸಂಪೂರ್ಣವಾಗಿ ಅಹ್ಲುಸುನ್ನದ ತತ್ವಾದರ್ಶಗಳಿಗೆ ಬದ್ಧರಾಗಿ, ಸುನ್ನಿ ನಾಯಕತ್ವವನ್ನು ಅಂಗೀಕರಿಸಿ ಜಿಲ್ಲೆಯಲ್ಲಿ ಸಂಘಟನೆಯ ಅಧೀನದಲ್ಲಿ ಹಲವು ಕ್ರಾಂತಿಕಾರಿ ಯೋಜನೆಗಳನ್ನು ಮಾಡಿದೆ. ಅನಿವಾಸಿ ಕೊಡಗಿನವರ ನಲ್ಮೆಯ ತಾಣವಾಗಿ ಯುಎಇಯಲ್ಲಿ ಆರಂಭಗೊಂಡ ಸಂಘಟನೆಯು ಇಂದು ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ (ಸೌದಿ ಅರೇಬಿಯಾ, ಕುವೈಟ್, ಬಹರೇನ್, ಕತ್ತಾರ್, ಒಮಾನ್) ತನ್ನ ಕಾರ್ಯಾಚರಣೆಯನ್ನು ವ್ಯಾಪ್ತಿಗೊಳಿಸಿದೆ.  

ಹಲವು ಸಾಂತ್ವನ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಮತ್ತು ಗಲ್ಫ್ ನಲ್ಲಿ ಮೆಚ್ಚುಗೆ ಪಡೆದಿರುವ ಸಂಘಟನೆಯು ಊರಿನಲ್ಲಿ ಹಲವು ಸಾಂತ್ವನ ಕಾರ್ಯಕ್ರಮಗಳು, ತುರ್ತು ಅವಶ್ಯಕತೆಗೆ ಬೇಕಾಗಿ ಆಂಬುಲೆನ್ಸ್, ಜಿಲ್ಲೆಯ ವಿದ್ಯಾ ಸಂಸ್ಥೆಗಳಿಗೆ ಬೇಕಾದ ಸಹಾಯ, ವಿದ್ಯೆ ವಂಚಿತ ಬಡ ವಿದ್ಯಾರ್ಥಿಗಳಿಗೆ ಬೇಕಾದ ನೆರವು ಸೇರಿದಂತೆ, ಕೊಡಗಿನ ಅನಿವಾಸಿಗಳಿಗೆ ಎಲ್ಲಾ ರೀತಿಯಲ್ಲಿಯೂ ಪ್ರತ್ಯೇಕವಾಗಿ ಗಲ್ಫ್ ನಲ್ಲಿ ಏನಾದರೂ ಅಪಘಾತಕ್ಕೀಢಾದಲ್ಲಿ ಅಥವಾ ರೋಗಕ್ಕೆ ತುತ್ತಾಗಿ ಕಷ್ಟದಲ್ಲಿ ಸಿಲುಕಿದರೆ ಧನಸಹಾಯ ಮಾಡುವುದು, ಮರಣ ಸಂಭವಿಸಿದರೆ ಅದಕ್ಕೆ ಪೂರಕವಾಗಿ ಸ್ಪಂದಿಸಿ ಇಲ್ಲಿನ ಕಾನೂನಿನಡಿಯಲ್ಲಿ ಅದಕ್ಕೆ ಬೇಕಾದ ಎಲ್ಲಾ ವ್ಯಸ್ಥೆಯನ್ನು ಮಾಡಿ ಊರಿಗೆ ಮೃತದೇಹವನ್ನು ತಲುಪಿಸಲು KSWA ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದೆ. 
ಕೊಡಗು ವೆಲ್ಫೇರ್ ಯುಎಇ ಸಮಿತಿ ಕಳೆದ ವರ್ಷ ಮೂರ್ನಾಡಿನಲ್ಲಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆರು ಜೋಡಿ ವಧು ವರರು ಸಪ್ತಪದಿ ತುಳಿದಿದ್ದು, ಅದರ ಮುಂದುವರಿದ ಭಾಗವಾಗಿ ಈ ವರ್ಷವೂ ಏಳು ಜೋಡಿ ನವ ಮಾಂಗಲ್ಯ ವಧು ವರ ರಿಗೆ ಬೇಕಾಗುವ ಚಿನ್ನ, ವಸ್ತ್ರಗಳು, ವಾಚ್, ಆಭರಣಗಳು ಎಲ್ಲವೂ  ಕೊಡಗು ಸುನ್ನಿ ವೆಲ್ಫೇರ್ ಅಸೋಷಿಯೇಷನ್ ಯುಎಇ ಸಮಿತಿಯು ನೀಡುತ್ತಿದ್ದು, ಕೋವಿಡ್ ಲಾಕ್ ಡೌನ್ ಆದ ಕಾರಣ ಏಳು ವಿವಾಹಗಳು ಪ್ರತ್ಯೇಕವಾಗಿ ನಡೆಯಲಿದೆ.

ಕೋವಿಡ್ ಸಮಯದಲ್ಲಿ ಜಿಲ್ಲೆಯಲ್ಲಿ ಮತ್ತು ಯುಎಇ ಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಹಲವರಿಗೆ ಬೇಕಾದ ಸಹಾಯ ನೀಡಿದ್ದು, ನಮ್ಮ ಸಮಿತಿಯು ಅರ್ಪಿಸಿದ ಆಂಬುಲೆನ್ಸ್ ಜಿಲ್ಲೆಯ ಹಲವು ಕಡೆ ಸಂಪೂರ್ಣವಾಗಿ ಉಚಿತ ಸೇವೆಯನ್ನು ನೀಡಿದೆ. ಅದೇ ರೀತಿ ಕಳೆದ ಎರಡು ವರ್ಷಗಳಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿಯೂ ಪೂರಕವಾಗಿ ಸ್ಪಂದಿಸಿದ ನಮ್ಮ ಸಂಘಟನೆಯು ಸಂತ್ರಸ್ತರಿಗೆ ಬೇಕಾದ ಎಲ್ಲಾ ಸಹಾಯವನ್ನು ಮಾಡಿತ್ತು.
 
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರು:

  1. ಹಂಝ ಪೊನ್ನಂಪೇಟೆ, ಅಬುಧಾಬಿ (ಉಪಾಧ್ಯಕ್ಷರು, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ)
  2. ಅಬ್ದುಲ್ಲಾ ಬಲಮುರಿ, ಶಾರ್ಜಾ (ಕ್ಯಾಬಿನೆಟ್ ಸದಸ್ಯರು,  ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ)
  3. ಸಲಾಂ ಕೊಂಡಂಗೇರಿ, ದುಬೈ (ಕ್ಯಾಬಿನೆಟ್ ಸದಸ್ಯರು,  ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ)    
  4. ಅಬ್ದುಲ್ ಲತೀಫ್ ಸುಂಟಿಕೊಪ್ಪ (ಊರಿನ ನಿರ್ದೇಶಕರು, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ,  ಹಾಗೂ  ಜಿಲ್ಲಾ ಪಂಚಾಯತ್ ಸದಸ್ಯರು)
  5. ಮುಝಮ್ಮಿಲ್ ಚಾಮಿಯಾಲ್, ದುಬೈ  (ಕ್ಯಾಬಿನೆಟ್ ಸದಸ್ಯರು,  ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ)
  6. ಹಾರಿಸ್ ಕೊಟ್ಟಮುಡಿ (ಸದಸ್ಯರು, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ)  

error: Content is protected !! Not allowed copy content from janadhvani.com