janadhvani

Kannada Online News Paper

ಮಕ್ಕಾ: 24 ಗಂಟೆಗಳ ಕರ್ಫ್ಯೂ ಘೋಷಿಸಲಾಗಿದ್ದ ಮಕ್ಕಾದಲ್ಲೂ ಕರ್ಫ್ಯೂ ಸಡಿಲಗೊಳಿಸಲಾಗುತ್ತದೆ.ವಿನಾಯಿತಿಯ ಮೊದಲ ಹಂತವು ಮೇ.31 ರವಿವಾರದಿಂದ ಪ್ರಾರಂಭವಾಗಲಿದ್ದು, ಜೂನ್ 20 ರವರೆಗೆ ಮುಂದುವರಿಯಲಿದೆ.

ರವಿವಾರದಿಂದ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಸಾರ್ವಜನಿಕರಿಗೆ ಮನೆಯಿಂದ ಹೊರಗಡೆ ತೆರಳುವುದು ಸಾಧ್ಯವಾಗಲಿದೆ. ಷರತ್ತುಗಳನ್ನು ಅನುಸರಿಸಿ ಹರಮ್‌ನಲ್ಲಿ ಎಲ್ಲಾ ಹೊತ್ತುಗಳು ಪ್ರಾರ್ಥನೆಗಳು ಮುಂದುವರಿಯುತ್ತದೆ. ಪ್ರಸ್ತುತ ಪ್ರತ್ಯೇಕ ಐಸೊಲೇಷನ್ ಏರ್ಪಡಿಸಲಾದ ವಲಯಗಳಲ್ಲಿ ಕಠಿಣ ನಿಬಂಧನೆಗಳು ಅಸ್ತಿತ್ವದಲ್ಲಿರಲಿವೆ.

ಜೂನ್ 21ರಿಂದ ಎರಡನೇ ಹಂತ ಪ್ರಾರಂಭಗೊಳ್ಳಲಿದ್ದು, ಹೆಚ್ಚಿನ ವಿನಾಯಿತಿಗಳನ್ನು ನೀಡಲಾಗುವುದು. ಕರ್ಫ್ಯೂ ಸಡಿಲಿಕೆಯನ್ನು ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ವಿಸ್ತರಿಸಲಾಗುವುದು. ಈ ಹಂತದಲ್ಲಿ ಮಸೀದಿಗಳಲ್ಲಿ ನಮಾಝ್, ಪ್ರಾರ್ಥನೆಯನ್ನು ಅನುಮತಿಸಲಾಗುತ್ತದೆ.

ಮಸ್ಜಿದುಲ್ ಹರಾಮ್ ನಲ್ಲಿನ ಪ್ರಾರ್ಥನೆ, ಪ್ರಸ್ತುತ ಚಾಲ್ತಿಯಲ್ಲಿರುವ ಕ್ರಮ ಪ್ರಕಾರ ಮುಂದುವರಿಯಲಿದೆ.ರೆಸ್ಟೋರೆಂಟ್‌ಗಳು ಮತ್ತು ಬೂಫಿಯಗಳು ಸೇರಿದಂತೆ ವ್ಯಾಪಾರ ಸಂಸ್ಥೆಗಳನ್ನು ತೆರೆಯಬಹುದಾಗಿದೆ.ಮದುವೆ ಇನ್ನಿತರ ಪಾರ್ಟಿಗಳಲ್ಲಿ 50ಕ್ಕಿಂತ ಹೆಚ್ಚು ಜನರಿಗೆ ಒಟ್ಟಿಗೆ ಸೇರಲು ಅವಕಾಶವಿಲ್ಲ.

ಆದರೆ ಕ್ಷೌರಿಕನ ಅಂಗಡಿಗಳು, ಮನರಂಜನಾ ಕೇಂದ್ರಗಳು ಮತ್ತು ಆರೋಗ್ಯ ಕ್ಲಬ್‌ಗಳು ಕಾರ್ಯನಿರ್ವಹಿಸುವಂತ್ತಿಲ್ಲ. ಸಂಪೂರ್ಣವಾಗಿ ಮುಚ್ಚಿದ ಪ್ರದೇಶಗಳಲ್ಲಿ ಎಚ್ಚರಿಕಾ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!