janadhvani

Kannada Online News Paper

ನೇತ್ರಾವತಿ ವಾರಿಯರ್ ಹಫೀಝ್ ಗೆ ಸಾರ್ವಜನಿಕರಿಂದ ಸನ್ಮಾನ

ಬಂಟ್ವಾಳ: ನೇತ್ರಾವತಿ ವಾರಿಯರ್ಸ್ ಗೆ ನಿಶಾಂತ್ ಸೇತುವೆಯಿಂದ ಹಾರಿದ ವಿಷಯ ತಲುಪಿಸಿದ ನಿಜವಾದ ವಾರಿಯರ್ ಹಫೀಝನನ್ನು ಸಾರ್ವಜನಿಕರು ಗುರುತಿಸಿ ಸನ್ಮಾನಿಸಿದ್ದಾರೆ.

ಕೆಲ ದಿನಗಳ ಹಿಂದೆ ಪಾಣೆಮಂಗಳೂರು ಹಳೆಯ ಸೇತೆಯಲ್ಲಿ ಆತ್ಮಹತ್ಯೆ ಪ್ರಯತ್ನಿಸಿದ ನಿಶಾಂತ್ ಎಂಬ ಯುವಕನನ್ನು ರಕ್ಷಿಸಲು ಸ್ಥಳೀಯ ಯುವಕರು ಹೊಳೆಗೆ ಹಾರಿ ಆತನ ರಕ್ಷಣೆಗೆ ಶತಾಯಗತಾಯ‌ ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ಅಂದು ನಿಶಾಂತನು ತನ್ನ ದ್ವಿಚಕ್ರ ವಾಹನ ನಿಲ್ಲಿಸಿ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುದ್ದಿದ್ದನ್ನು ಕಂಡ ಈ ಹಫೀಝ್, ನಿಶಾಂತನ ಬಳಿ ಮಾನವೀಯತೆಯ ನೆಲೆಯಲ್ಲಿ ಸಮಸ್ಯೆ ಏನೆಂದು ವಿಚಾರಿಸಿದ್ದಾನೆ, ಗಾಡಿಯ ಪೆಟ್ರೋಲ್ ಮುಗಿದಿದೆ ಎಂದ ನಿಶಾಂತ್, ಹಫೀಝನಲ್ಲಿ ತೆರಳುವಂತೆ ಸೂಚಿಸಿದ್ದಾನೆ. ಹಫೀಝ್ ಸೇತುವೆ ಬಳಿ ಸಾಗುತ್ತಿದ್ದಂತೆ, ನಿಶಾಂತ್ ನದಿಗೆ ಹಾರಿದ್ದಾನೆ.

ಇದನ್ನು ಗಮನಿಸಿದ ಹಫೀಝನು ಮೊದಲು ನೇತ್ರಾವತಿ ವಾರಿಯರ್ಸ್ ಮನೆ ಬಾಗಿಲಿಗೆ ತೆರಳಿ ವಿಷಯ ಮುಟ್ಟಿಸಿದ್ದಾನೆ. ಮಾತ್ರವಲ್ಲ ನಿಶಾಂತನು ಧುಮುಕಿದ್ದ ನಿರ್ದಿಷ್ಟ ಸ್ಥಳವನ್ನು ಕೂಡ ಸೂಚಿಸಿದ್ದಾನೆ. ಗೂಡಿನಬಳಿಯ ಹಸನ್ ಮತ್ತು ಮುಮ್ತಾಝ ದಂಪತಿಗಳ ಸುಪುತ್ರ ಹಫೀಝ್, ಪಾಣೆಮಂಗಳೂರಿನ ಆಲಡ್ಕದಲ್ಲಿರುವ ಕೆ-4 ಕ್ಯಾಟರಿಂಗ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.

ನೇತ್ರಾವತಿ ವೀರರನ್ನು ಸನ್ಮಾನಿಸುವ ಭರದಲ್ಲಿ ಎಲ್ಲರೂ ಈ ಎಳೆಯ ಬಾಲಕನನ್ನು ಮರೆತಿರಬಹುದು, ಆದರೆ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಅರಿತಿದ್ದ ಕೆ-4 ಕ್ಯಾಟರಿಂಗ್ ಮಾಲಕರಾದ ರಝಾಕ್ ಮದೀನಾ ಮುನವ್ವರ, ಅಬೂಬಕ್ಕರ್ ಪುತ್ತು ಬಾವು, ಬಶೀರ್, ಮುಹಮ್ಮದ್ ಶುಹೈಬ್ ಹಾಗೂ ಯೂಸುಫ್ ಸಾಲ್ಮರ ಅವರು ಬಾಲಕನನ್ನು ಅಭಿನಂದಿಸಿ ಸನ್ಮಾನ ಮಾಡಿದ್ದಾರೆ. ನಿಶಾಂತ್ ನನ್ನು ರಕ್ಷಿಸಲು ಹೊರಟ ಬಾಲಕರು ನೇತ್ರಾವತಿ ವಾರಿಯರ್ಸ್‌ ಎಂದು ಪ್ರಖ್ಯಾತಿಯಾಗಲು ಕಾರಣ ಈ ಹಫೀಝ್ . ಹಫೀಝ್ ನ ಸೇವೆಗೆ ನಾವೆಲ್ಲರೂ ಮೆಚ್ಚಲೇಬೇಕು

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!