ರಿಯಾದ್: ಸೌದಿ ಅರೇಬಿಯಾದಲ್ಲಿ ಕೋವಿಡ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಏರ್ಪಡಿಸಲಾದ ನಿರ್ಬಂಧಗಳನ್ನು ಸಡಿಲಿಸುವುದಾಗಿ ಗೃಹ ಸಚಿವಾಲಯ ಘೋಷಿಸಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಹಾಜರಾಗಲು ಇರುವ ನಿರ್ಬಂಧವನ್ನು ಸಚಿವಾಲಯ ತೆಗೆದುಹಾಕಿದೆ. ಗುರುವಾರದಿಂದ ಎಲ್ಲರೂ ಅತೀವ ಮುಂಜಾಗ್ರತೆಯಿಂದ ಕೆಲಸಕ್ಕೆ ಹಾಜರಾಗಬಹುದು. ದೇಶದ ಎಲ್ಲಾ ಸಣ್ಣ ಮತ್ತು ದೊಡ್ಡ ವಾಣಿಜ್ಯ ವ್ಯವಹಾರ ಕೇಂದ್ರಗಳಲ್ಲಿ ಕೆಲಸ ಆರಂಭಿಸಬಹುದಾಗಿದೆ.
ದೇಶೀಯ ವಿಮಾನಗಳ ಮೇಲಿನ ನಿರ್ಬಂಧವನ್ನೂ ರದ್ದುಪಡಿಸಲಾಗಿದೆ. ವೈಮಾನಿಕ ಸೇವೆಯನ್ನು ಸುರಕ್ಷತೆಯೊಂದಿಗೆ ಹಂತಹಂತವಾಗಿ ಆರಂಭಿಸಲಾಗುತ್ತದೆ. ದೇಶದ ಪ್ರಾಂತ್ಯಗಳ ನಡುವಿನ ಪ್ರಯಾಣ ತಡೆಯನ್ನು ಭಾಗಶಃ ಹಿಂತೆಗೆದುಕೊಳ್ಳಲಾಯಿತು. ಗುರುವಾರದಿಂದ ಶನಿವಾರದವರೆಗೆ(ಮೇ.28-30) ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಜನರು ಪ್ರಾಂತ್ಯಗಳ ನಡುವೆ ಮತ್ತು ನಗರಗಳ ನಡುವೆ ಪ್ರಯಾಣಿಸಬಹುದು.
ಎರಡನೇ ಹಂತದ ಸಡಿಲಿಕೆ ಮೇ 31 ಕ್ಕೆ ಆರಂಭ. ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ಪ್ರಾಂತ್ಯಗಳ ನಡುವೆ ಪ್ರಯಾಣ ನಡೆಸಬಹುದು. ಆದರೆ ಮಕ್ಕಾಕಡೆಗೆ ಯಾತ್ರೆ ಮತ್ತು ಉಮ್ರಾ ಸ್ಥಗಿತ ಗೊಳಿಸಿರುವುದನ್ನು ಮುಂದುವರಿಸಲಾಗಿದೆ. ಜೂನ್ 21 ರಿಂದ ದೇಶ ಸಾಮಾನ್ಯ ಸ್ಥಿತಿಗೆ ಮರಳಲಿದೆ.ಅಂದಿನಿಂದ ಮಕ್ಕಾ ಹೊರತುಪಡಿಸಿ ದೇಶದ ಎಲ್ಲೆಡೆ ಪ್ರಯಾಣಿಸಬಹುದು. ಅಂತರರಾಷ್ಟ್ರೀಯ ವಿಮಾನಯಾನ ಪ್ರಾರಂಭವಾಗುವ ದಿನಾಂಕವನ್ನು ಘೋಷಿಸಲಾಗಿಲ್ಲ.
ಮಕ್ಕಾ ಹೊರತುಪಡಿಸಿ ದೇಶದ ಎಲ್ಲಾ ಮಸೀದಿಗಳಲ್ಲಿ ಮುಂದಿನ ಭಾನುವಾರದಿಂದ(ಮೇ.31) ಪ್ರಾರ್ಥನೆಗಳಿಗೆ ಅವಕಾಶ ನೀಡಲಾಗಿದೆ,ಆದರೆ ಸಚಿವಾಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ರೆಸ್ಟೋರೆಂಟ್ಗಳು ಮತ್ತು ಕೆಫೆಗಳಿಗೆ ಏರ್ಪಡಿಸಲಾಗಿದ್ದ ನಿಯಂತ್ರಣವನ್ನೂ ಸಡಿಲಿಸಲಾಗಿದೆ. ಸಚಿವಾಲಯದ ಅಧಿಸೂಚನೆ ನಿಯಮಗಳಿಗೆ ಅನುಸಾರವಾಗಿ ಕೆಲಸ ಮಾಡಬಹುದು.
ಕ್ಷೌರಿಕನ ಅಂಗಡಿಗಳು, ಜಿಮ್, ಸಿನೆಮಾ, ವಿವಾಹಗಳು, ಮನರಂಜನೆ ಮತ್ತು ಇತರ ಕಾರ್ಯಕ್ರಮಗಳ ನಿಷೇಧ ಮುಂದುವರಿಯಲಿದೆ. ಐವತ್ತಕ್ಕಿಂತ ಹೆಚ್ಚಿನ ಜನರು ಸೇರುವ ಯಾವುದೇ ಕಾರ್ಯಕ್ರಮವನ್ನು ಅನುಮತಿಸಲಾಗುವುದಿಲ್ಲ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ