janadhvani

Kannada Online News Paper

ಮಂಗಳೂರು: ಲಾಕ್ ಡೌನ್ ಸಡಿಲಿಕೆಯೊಂದಿಗೆ, ಮಸೀದಿಯಲ್ಲಿ ಆರಾಧನಾ ಚಟುವಟಿಕೆ ಪ್ರಾರಂಭಿಸಲು ಅನುವು ಕೋರಿ ಸಾಮೂಹಿಕ ಮನವಿಯೊಂದನ್ನು ಮಾಜಿ ಮೇಯರ್ ಕೆ.ಅಶ್ರಫ್ (ಅಧ್ಯಕ್ಷರು,ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ)ಇವರು ರಾಜ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದಾರೆ.

ಇಂದು ಮುಖ್ಯಮಂತ್ರಿಗಳ ಸಭೆಯ ನಂತರ ದ.ಕ . ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ. ಶ್ರೀನಿವಾಸ್ ಪೂಜಾರಿ ಅವರು,ಜೂನ್ 1 ರಿಂದ ದೇವಸ್ತಾನಗಳನ್ನು ಆರಾಧನಾ ಚಟುವಟಿಕೆಗಳಿಗೆ ತೆರೆದುಕೊಳ್ಳಲು ಅನುಮತಿಸಲಾಗಿದೆ ಎಂದು ಮಾದ್ಯಮದ ಮೂಲಕ ಹೇಳಿಕೆ ನೀಡಿದ್ದು,ಇತರ ಸಮುದಾಯದ ಆರಾಧನಾಲಯಗಳ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ತಿಳಿಸಲಾಗಿದೆ.

ಸರಕಾರದ ಈ ನಡೆ ತೀವ್ರ ಖೇದಕರ. ಜನರ ಆರಾಧನಾ ಹಕ್ಕನ್ನು ಸರಕಾರ ಯಾವ ರೀತಿಯಲ್ಲೂ ತಡೆಯುವಂತಿಲ್ಲ. ದೇವಸ್ಥಾನ ಮಾತ್ರ ತೆರೆಯಲು ಅನುಮತಿಸಿದ್ದು, ಮಸೀದಿ, ಚರ್ಚು, ಗುರುದ್ವಾರಗಳನ್ನು ಆರಾಧನಾ ಚಟುವಟಿಕೆಗಳಿಗೆ ಅನುಮತಿಸದೆ ಇರುವುದು ಸರಕಾರವು ಮತೀಯತೆಯನ್ನು ಪ್ರೋತ್ಸಾಹಿಸುವ ಬಗ್ಗೆ ಸಂಶಯ ವ್ಯಕ್ತ ಪಡಿಸಬೇಕಾಗುತ್ತದೆ.

ಸರ್ಕಾರವು ಸರ್ವಜಾತಿ, ಮತ ಸಮುದಾಯದ ಆರಾಧನಾಲಯಗಳನ್ನು ಏಕಕಾಲದಲ್ಲಿ ತೆರೆಯಲು ಶೀಘ್ರ ಅನುಮತಿಸಬೇಕು,ಅದರಲ್ಲೂ ಮುಸ್ಲಿಮ್ ಸಮುದಾಯದ ಮಸೀದಿಗಳನ್ನು ತೆರೆಯಲು ಅನುಮತಿಸಬೇಕಾಗಿರುವುದು ಸರಕಾರದ ಪ್ರಥಮ ಆದ್ಯತೆಯಾಗಿರಲಿ, ಯಾಕೆಂದರೆ ಮುಸ್ಲಿಮ್ ಸಮುದಾಯವು ಸರ್ಕಾರದ ಸೋಂಕು ನಿಯಂತ್ರಣದ ಭಾಗವಾಗಿ ಏರ್ಪಡಿಸಿದ ನಿಯಂತ್ರಣದಲ್ಲಿ ಸಂಪೂರ್ಣ ಸಹಕಾರವನ್ನು ನೀಡಿದೆ.

ಈ ಮನವಿಯನ್ನು ಸರಕಾರ ಉತ್ತಮ ರೀತಿಯಲ್ಲಿ ಪರಿಗಣಿಸುವುದಾಗಿ ನಂಬುತ್ತೇವೆ.

ಕೆ.ಅಶ್ರಫ್ ,
(ಮಾಜಿ ಮೇಯರ್)
ಅಧ್ಯಕ್ಷರು,ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಅಲ್ ಅರ ಫ್ ,ಬಂದರ್,
ಮಂಗಳೂರು.
9448143937
email: hanifdkmv@gmail.com

error: Content is protected !! Not allowed copy content from janadhvani.com