ಗಟ್ಟಮನೆ SYS, SSF ಶಾಖಾ ವತಿಯಿಂದ ಈದ್ ಕಿಟ್ ವಿತರಣೆ

ಕೊರೋನ ವೈರಸ್ ನಿಂದಾಗಿ ಜನಸಾಮಾನ್ಯರು ಅತಂತ್ರ ಸ್ಥಿತಿ ಅನುಭವಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ, ಮುಸ್ಲಿಂ ಸಮುದಾಯ ಸರಳವಾಗಿ ಈದ್ ಆಚರಿಸಲು ಮುಂದಾಗಿದ್ದು ಎಸ್ ವೈ ಎಸ್ ಹಾಗೂ ಎಸ್ಸೆಸ್ಸಫ್ ಗಟ್ಟಮನೆ ಶಾಖಾ ವತಿಯಿಂದ KCF ಸಹಕಾರದೊಂದಿಗೆ ಗಟ್ಟಮನೆ ಜಮಾಅತ್ ವ್ಯಾಪ್ತಿಯ ಸುಮಾರು 90 ರಷ್ಟು ಮನೆಗಳಿಗೆ (ಆಡಿನ ಮಾಂಸ) ಮೀಟ್ ಕಿಟ್ ವಿತರಿಸಲಾಯಿತು.

ಲಾಕ್ ಡೌನ್ ಸಂದರ್ಭದಲ್ಲೂ ಅಸಹಾಯಕರಿಗೆ ಆಸರೆಯಾಗುವ ಮೂಲಕ ತನ್ನ ಮಾನವೀಯ ಸೇವೆಯ ಮೂಲಕ ಗಟ್ಟಮನೆ SYS & ಎಸ್ಸೆಸ್ಸಫ್ ಕಾರ್ಯಕರ್ತರು ಊರವರ ಪ್ರಶಂಸೆಗೆ ಪಾತ್ರರಾಗಿದ್ದರು.

ಈ ಸಂದರ್ಭದಲ್ಲಿ ಶಾಖಾ ಕಾರ್ಯಕರ್ತರಾದ ಅಬೂಬಕ್ಕರ್ ಸಿ.ಎಮ್, ಸುಲೈಮಾನ್ ಬೇರಿಕೆ ಪುತ್ತೂರು ಡಿವಿಷನ್ ಅಧ್ಯಕ್ಷರಾದ ಝುಬೈರ್ ಸಖಾಫಿ ಗಟ್ಟಮನೆ, ಗಟ್ಟಮನೆ ಶಾಖಾದ್ಯಕ್ಷರಾದ ಸ್ವಾಲಿಹ್ ಜೌಹರಿ ಗಟ್ಟಮನೆ, ಕಾರ್ಯದರ್ಶಿ ಇರ್ಷಾದ್ ಗಟ್ಟಮನೆ, ರಿಯಾಝ್ ಗಟ್ಟಮನೆ ,ಶಫೀಕ್ ಮುಸ್ಲಿಯಾರ್ ಸಿ.ಎಮ್, ಹನೀಫ್ ಮುಸ್ಲಿಯಾರ್, ಸಿನಾನ್ ಗಟ್ಟಮನೆ ಉಪಸ್ಥಿತರಿದ್ದರು.

One thought on “ಗಟ್ಟಮನೆ SYS, SSF ಶಾಖಾ ವತಿಯಿಂದ ಈದ್ ಕಿಟ್ ವಿತರಣೆ

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!