janadhvani

Kannada Online News Paper

ಅನಿವಾಸಿಗಳು ತವರಿಗೆ-ಉತ್ತಮ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ

ಮಂಗಳೂರು: ವಿಶ್ವಾದ್ಯಂತ ಹರಡಿರುವ ಮಾರಕ ಕೊರೋನಾ ವೈರಸ್ ನಿಂದಾಗಿ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕರಾವಳಿಗರು ಆಗಮಿಸಲಿದ್ದಾರೆ.

ಭಾರತಕ್ಕೆ ಮರಳಿ ಬರುತ್ತಿರುವ ಜನರಿಗೆ ಕ್ವಾರಂಟೈನ್ ಸಂಧರ್ಭದಲ್ಲಿ ಯಾವುದೇ ರೀತಿಯಲ್ಲೂ ನಿರ್ಲಕ್ಷ್ಯ ತೋರದೆ ಸೂಕ್ತವಾಗಿ ಮತ್ತು ಉತ್ತಮವಾದ ಗುಣಮಟ್ಟದ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀಮತಿ ಸಿಂಧು.ಬಿ. ರೂಪೇಶ್ ರವರೊಂದಿಗೆ ಮುಸ್ಲಿಂ ಮುಖಂಡರ ನಿಯೋಗವು ಮಾತುಕತೆ ನಡೆಸಿ ಮನವಿ ಮಾಡಲಾಯಿತು.

ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಎಮ್ ಫಾರೂಕ್, ಶಾಸಕ ಯುಟಿ ಖಾದರ್,ಮಾಜಿ ಶಾಸಕ ಮೊಹೀದಿನ್ ಬಾವ, ಶಾಫಿ ಸಅದಿ, ಮಮ್ತಾಝ್ ಅಲಿ, ಎಸ್, ಎಮ್ ರಷೀದ್ ಹಾಜಿ, ಕಾಸಿಂ, ಅಬ್ದುಲ್ ಹಮೀದ್ ಬಜ್ಪೆ, ಅಶ್ರಫ್ ಕಿನಾರ ಮಂಗಳೂರು ಮುಂತಾದ ನಾಯಕರುಗಳು ಹಾಜರಿದ್ದರು.

error: Content is protected !! Not allowed copy content from janadhvani.com