janadhvani

Kannada Online News Paper

ಮದೀನಾದ ವಿವಿಧ ಪ್ರದೇಶಗಳಿಗೆ ಏರ್ಪಡಿಸಲಾದ ಕರ್ಫ್ಯೂ ಸಡಿಲಿಕೆ

ಮದೀನಾ: ಮದೀನಾದ ವಿವಿಧ ವಸತಿ ಕೇಂದ್ರಗಳಲ್ಲಿ ಏರ್ಪಡಿಸಲಾದ ಐಸೋಲೇಷನ್ ಅನ್ನು ಸೌದಿ ಗೃಹ ಸಚಿವಾಲಯ ಇಂದಿನಿಂದ ತೆಗೆದುಹಾಕಿಗಿದೆ.

ಮದೀನಾದ ಶರ್ಬಾತ್, ಬನೀ ಲಫರ್, ಖುರ್ಬಾನ್, ಅಲ್-ಜುಮುಆ, ಅಲ್-ಇಸ್ಕಾನ್ ಮತ್ತು ಬನೀ ಕುಲ್‌ರಾ ಮತ್ತಿತರ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ಹೇರಲಾಗಿದ್ದ ಕರ್ಫ್ಯೂ‌ವನ್ನು ಸಡಿಲಗೊಳಿಸಲಾಗಿದೆ.

ಇದರೊಂದಿಗೆ ಜನರು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಹೊರಗೆ ಹೋಗಬಹುದು. ಸಂಜೆ 5 ರಿಂದ ಮರುದಿನ ಬೆಳಗ್ಗೆ 9 ರವರೆಗೆ ಕರ್ಫ್ಯೂ ಮುಂದುವರಿಯಲಿದೆ. ಕೋವಿಡ್ ಪ್ರಕರಣಗಳು ಹರಡದಂತೆ ತಡೆಯಲು ಹರಡುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಐಸೋಲೇಷನ್ ಏರ್ಪಡಿಸಲಾಗುತ್ತದೆ.

error: Content is protected !! Not allowed copy content from janadhvani.com