janadhvani

Kannada Online News Paper

ಬೆಂಗಳೂರು- ಮಾಸ್ಕ್ ಕಡ್ಡಾಯ ಗೊಳಿಸಿದ ಪಾಲಿಕೆ

ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ ಮಾಸ್ಕ್ ಧರಿಸದ ಹೊರಗಿಳಿಯುವಂತಿಲ್ಲ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ಉಗುಳುವ ಹಾಗೂ ಇಲ್ಲ ತಪ್ಪದಲ್ಲಿ ದೊಡ್ಡ ಮೊತ್ತದ ದಂಡ ಬೀಳೋದು ನಿಶ್ಚಿತ.

ಈ ಬಗ್ಗೆ ಆದೇಶ ಹೊರಡಿಸಿರುವ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಜನರು ಸಾರ್ವಜನಿಕವಾಗಿ ಹೊರಗಡೆ ಹೋಗುವಾಗ ಕಡ್ಡಾಯವಾಗಿಯೂ ಮಾಸ್ಕ್ ಧರಿಸಬೇಕು ಇಲ್ಲದಿದ್ದಲ್ಲಿ ಮೊದಲ ಬಾರಿ 1000 ರೂ ದಂಡ ಮತ್ತು ಪುನರಾವರ್ತಿತ ಪ್ರಕರಣಕ್ಕೆ 2000 ರೂ ದಂಡ ವಸೂಲಿ ಮಾಡಲಾಗುವುದು, ಸಾರ್ವಜನಿಕವಾಗಿ ಕಂಡ ಕಂಡಲ್ಲಿ ಮೂತ್ರ ಮಾಡುವವರಿಗೂ, ತಂಬಾಕು ತಿಂದು ಉಗುಳುವವರಿಗೂ ದಂಡ ಬೀಳಲಿದೆ ಎಂದು ಮಾಹಿತಿ ನೀಡಿದ್ದಾರೆ. ಉಪಯೋಗಿಸಿದ ಕೈಗವಚ, ಮುಖಗವಚ ಗಳನ್ನು ಕಾಲಿ ಚೀಲದಲ್ಲಿ ಹಾಕಿ ಕಸದ ವಾಹನಕ್ಕೆ ನೀಡಬೇಕು ಎಲ್ಲೆಂದಲ್ಲಿ ಬಿಸಾಕಬಾರದು ಎಂದು ತಿಳಿಸಿದರು

error: Content is protected !! Not allowed copy content from janadhvani.com