janadhvani

Kannada Online News Paper

ಹಸಿರು ವಲಯ ದಾವಣಗೆರೆಯಲ್ಲಿ ಒಂದೇ ದಿವಸ 6 ಕೊರೋನಾ ಪ್ರಕರಣಗಳು ಪತ್ತೆ…!

ದಾವಣಗೆರೆ: ಸತತವಾಗಿ 14 ದಿವಸ ಯಾವುದೇ ಕೋವಿಡ್ 19 ಪ್ರಕರಣ ದಾಖಲಾಗದೆ ಇದ್ದು ಹಸಿರು ವಲಯವಾಗಿ ಗುರುತಿಸಿಕೊಂಡಿದ್ದ ದಾವಣಗೆರೆ ಯಲ್ಲಿ ಇಂದು ಒಂದೇ ದಿವಸ 6 ಪ್ರಕರಣಗಳು ಪತ್ತೆಯಾಗಿ ಆತಂಕ ಮೂಡಿಸಿದೆ.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಈ ಬಗ್ಗೆ ಮಾಹಿತಿ ನೀಡಿದ್ದು, ಸೋಂಕಿತರು ಇರುವ ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ ಡವ್ನ್ ಮಾಡಲಾಗಿದ್ದು ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು.533ನೇ ಸೋಂಕಿತ ಮಹಿಳೆಯ 16 ವರ್ಷದ ಪುತ್ರನಿಗೂ ಸೋಂಕು ತಗುಲಿದೆ. ಇನ್ನು 556ನೇ ಸೋಂಕಿತರ ಸಂಪರ್ಕಕ್ಕೆ ಬಂದ ಐದು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

ಇಂದು ರಾಜ್ಯದಲ್ಲಿ ಒಟ್ಟು 17 ಕೋವಿಡ್ ಪ್ರಕರಣ ಪತ್ತೆಯಾಗಿದ್ದು ಇದರೊಂದಿಗೆ ರಾಜ್ಯವಾರು ಸೋಂಕಿತರ ಸಂಖ್ಯೆ 582 ಕ್ಕೇರಿದೆ

error: Content is protected !! Not allowed copy content from janadhvani.com