janadhvani

Kannada Online News Paper

ಲಾಕ್ ಡೌನ್ ಸಮಯದಲ್ಲೂ KCF ಸಾಂತ್ವನ ಕಾರ್ಯಕರ್ತರಿಂದ ದಫನ ಕಾರ್ಯಕ್ಕೆ ನೆರವು

ಸೌದಿ ಅರೇಬಿಯಾ: ಮದೀನಾ ಮುನವ್ವರದಲ್ಲಿ ಇತ್ತೀಚಿಗೆ ಮರಣಹೊಂದಿದ ಮಹಾರಾಷ್ಟ್ರದ ಕೊರೊನಾ ಪೀಡಿತ ವ್ಯಕ್ತಿಯ ಮರಣೋತ್ತರ ಕ್ರಿಯೆ ಹಾಗೂ ದಫನ ಕಾರ್ಯಕ್ಕೆ ಬೇಕಾದ ಭಾರತೀಯ ದೂತಾವಾಸ ಕಛೇರಿಯ ಅಗತ್ಯ ದಾಖಲೆ ಪತ್ರಗಳ ಕಾನೂನು ಪ್ರಕ್ರಿಯೆ, ಹಾಗೂ ಇನ್ನಿತರ ಕೆಲಸ ಕಾರ್ಯದಲ್ಲಿ ಸಧ್ಯದ ಕಠಿಣ ಪರಿಸ್ಥಿತಿಯಲ್ಲಿ ಕುಟುಂಬಸ್ತರ ಅಪೇಕ್ಷೆ ಮೇರೆಗೆ ಕೆ.ಸಿ.ಎಫ್ ಸಾಂತ್ವನ ಕಾರ್ಯಕರ್ತರು ನೆರವಾಗಿದ್ದಾರೆ.

ಮದೀನಾ ಮುನವ್ವರದಲ್ಲಿ ಎಪ್ರಿಲ್ 21ರಂದು ಮರಣಹೊಂದಿದ ಪುಣೆಯ ವ್ಯಕ್ತಿಯೊಬ್ಬರ ಮರಣೋತ್ತರ ಕ್ರಿಯೆ ನಿರ್ವಹಿಸಲು, ವಾರಸುದಾರಿಕೆ ತೆಗೆದುಕೊಳ್ಳಲು ಕುಟುಂಬಸ್ತರು, ಪರಿಚಯಸ್ತರು ಯಾರು ಇಲ್ಲದಾಗ… ಕೆ.ಸಿ.ಎಫ್ ಸಾಂತ್ವನ ಕಾರ್ಯಕರ್ತರೊಬ್ಬರ ಹೆಸರಿಗೆ ಕುಟುಂಬಸ್ತರು ದಫನ ಕಾರ್ಯಕ್ಕೆ ಬೇಕಾದ ವಾರಸುದಾರಿಕೆಯ ದಾಖಲೆ ವರ್ಗಾವಣೆ ಮಾಡಿ ಲಾಕ್ ಡೌನ್ ಸಮಯದಲ್ಲಿ ಪೊಲೀಸ್ ಇಲಾಖೆಯ ವಿಶೇಷ ಅನುಮತಿ ಪಡೆದು ಸ್ವತಃ ಕೆ.ಸಿ.ಎಫ್ ಸಾಂತ್ವನ ಕಾರ್ಯಕರ್ತರು ಮುಂದೆ ನಿಂತು ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ ದಫನ ಕಾರ್ಯ ನೆರವೇರಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಉಮ್ರಾ,ಹಜ್ಜ್, ಹಾಗೂ ಅನಿವಾಸಿಯಾಗಿ ಬಂದು ಮದೀನಾ ಮುನವ್ವರದಲ್ಲಿ ಮರಣ ಸಂಭವಿಸಿದಾಗ ನೂರಕ್ಕಿಂತ ಅಧಿಕ ಮಂದಿಯ ದಫನ ಕಾರ್ಯಕ್ಕೆ ನೆರವು ನೀಡಲಾಗಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಹೆಚ್ಚುವರಿ ದಾಖಲೆ ಹಾಗೂ ವಾರಸುದಾರರ ಕಡೆಯಿಂದ ಎರಡು ಮಂದಿಗೆ‌ ಮಾತ್ರ ಅನುಮತಿ ನೀಡಲಾಗುತ್ತದೆ ಹಾಗೂ ದಫನ ಕಾರ್ಯಕ್ಕೆ ಭಾಗವಹಿಸಿದ ನಂತರ ‌ ಪೋಲಿಸ್ ಇಲಾಖೆ ಹೋಮ್ ಕೊರಂಟೈನ್ನಲ್ಲಿರುವಂತೆ ಸಲಹೆ ನೀಡಿದ್ದಾರೆ ಎಂದು ಕೆ.ಸಿ.ಎಫ್ ಮದೀನಾ ಮುನವ್ವರ ಝೋನ್ ಸಾಂತ್ವನ ಇಲಾಖೆ ಕನ್ವೀನರ್ ರಝ್ಝಾಖ್ ಉಳ್ಳಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com