janadhvani

Kannada Online News Paper

ಸೌದಿ: ರಂಝಾನ್‌ನಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಹೊರಬರಲು ಅವಕಾಶ

ರಿಯಾದ್: ರಂಝಾನ್‌ನಲ್ಲಿ ಕರ್ಫ್ಯೂ ಸಡಿಲಿಕೆ ಸಮಯವನ್ನು ಗೃಹ ಸಚಿವಾಲಯವು ಬದಲಾಯಿಸಿದೆ. ರಂಝಾನ್ ಉಪವಾಸ ಆರಂಭ ಗೊಂಡ ದಿನದಿಂದ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗಿನ ಏಕೈಕ ಸಮಯ ಮಾತ್ರ ಮನೆಯಿಂದ ಹೊರಬರಲು ಅವಕಾಶ.

ಪ್ರಮುಖ ಆದೇಶಗಳು ಇಲ್ಲಿವೆ.

1. ದೇಶದ ಎಲ್ಲಾ ಪ್ರದೇಶಗಳಲ್ಲೂ ರಂಝಾನ್‌ನಲ್ಲಿ ಹೊರಬರುವ ಸಮಯವೆಂದರೆ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಮಾತ್ರ.

ಪ್ರಸ್ತುತ ಮಧ್ಯಾಹ್ನ 3 ಗಂಟೆಗೆ ಕರ್ಫ್ಯೂ ಇರುವ ಸ್ಥಳಗಳಲ್ಲಿ ಸಂಜೆ 5ರಿಂದ ಬೆಳಿಗ್ಗೆ 9ರವರೆಗೆ ಕರ್ಫ್ಯೂ ಮುಂದುವರಿಯಲಿದೆ. ಅಂದರೆ 24 ಗಂಟೆಗಳ ಕರ್ಫ್ಯೂ ಇಲ್ಲದ ಸ್ಥಳಗಳಲ್ಲಿ, ರಂಝಾನ್ ಸಮಯದಲ್ಲಿ ಕರ್ಫ್ಯೂ ಸಮಯ ಸಂಜೆ 5 ರಿಂದ ಬೆಳಿಗ್ಗೆ 9 ರವರೆಗೆ ಇರುತ್ತದೆ.

2. ಪ್ರಸ್ತುತ 24 ಗಂಟೆಗಳ ಕರ್ಫ್ಯೂ ಇರುವ ಸ್ಥಳಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಸಡಿಲಿಕೆ ಜಾರಿಯಲ್ಲಿದೆ ಆದರೆ ರಮಳಾನ್ ನಲ್ಲಿ ಹೊರಬರಲು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸುವ ಸಮಯವನ್ನು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ನಿಗದಿಪಡಿಸಲಾಗಿದೆ. ಸಮೀಪದ ಅಂಗಡಿಗಳಿಂದ ಸರಕುಗಳನ್ನು ಖರೀದಿಸಬಹುದು.

3. ಈ ಹಿಂದೆ,ಮಕ್ಕಾ, ಮದೀನಾ,ಜಿದ್ದಾ ಮತ್ತು ದಮ್ಮಾಮ್ ನ ನಿರ್ದಿಷ್ಟ ಪ್ರದೇಶಗಳಲ್ಲಿನ ಜನರನ್ನು ಕ್ವಾರಂಟೈನ್‌ನಲ್ಲಿ ಪೂರ್ಣ ಸಮಯ ಉಳಿಯುವಂತೆ ಕೇಳಲಾಗಿತ್ತು. ಅಲ್ಲಿ ಯಾವುದೇ ರಿಯಾಯಿತಿ ಇಲ್ಲ , ಪೂರ್ಣವಾಗಿ ಲಾಕ್ ಡೌನ್ ಮುಂದುವರಿಯಲಿದೆ.

error: Content is protected !! Not allowed copy content from janadhvani.com