janadhvani

Kannada Online News Paper

ಏಷ್ಯಾ ಮೂಲದ ವಲಸಿಗರ ಅವಮಾನ- ಯುಎಇಯ ಪತ್ರಕರ್ತನ ಬಂಧನ

ದುಬೈ: ಏಷ್ಯಾ ಮೂಲದ ವಲಸಿಗರನ್ನು ಅವಮಾನಿಸುವ ರೀತಿಯಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಧ್ವೇಷ ಹರಡುವಂತೆ ಪ್ರಚಾರ ನಡೆಸಿದ ಯುಎಇ ಮೂಲದ ಪತ್ರಕರ್ತನೊಬ್ಬನನ್ನು ಬಂಧಿಸಲಾಗಿದೆ.

ಕವಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿರುವ ತಾರಿಕ್ ಅಲ್-ಮೆಹ್‌ಯಾಸ್ ಬಂಧಿತ ವ್ಯಕ್ತಿ. ವೀಡಿಯೊದಲ್ಲಿ ಭಾರತೀಯರು ಮತ್ತು ಬಂಗಾಳಿಗಳನ್ನು ಅರಬ್ ಪ್ರಜೆಗಳೊಂದಿಗೆ ಹೋಲಿಸುವಲ್ಲಿ ಆತನ ಕೃತ್ಯವು ತೀವ್ರ ಕಾನೂನುಬಾಹಿರ ಎಂದು ಉಲ್ಲೇಖಿಸಿ ಸಾರ್ವಜನಿಕ ಪ್ರೋಸಿಕ್ಯೂಷನ್ ಆತನನ್ನು ಬಂಧಿಸಲು ಆದೇಶಿಸಿದೆ. ಸಮಾಜದ ಭಾವನೆಗಳನ್ನು ಕೆದಕುವಂತಹ ಪ್ರಯತ್ನವನ್ನು ಆತ ಮಾಡಿದ್ದಾನೆ. ಈ ಕ್ರಮ ಯುಎಇ ಎತ್ತಿಹಿಡಿದಿರುವ ಸಹಿಷ್ಣುತೆ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಯುಎಇ ಅಧಿಕಾರಿ ತಿಳಿಸಿದ್ದಾರೆ.

ದೇಶ, ನಂಬಿಕೆ, ಬಣ್ಣ ಅಥವಾ ಭಾಷೆಯ ಹೆಸರಿನಲ್ಲಿ ವಿಭಾಗೀಯತೆಗೆ ಪ್ರಯತ್ನಿಸುವುದನ್ನು ದೇಶದಲ್ಲಿ ಅನುಮತಿಸಲಾಗುವುದಿಲ್ಲ. ಅಂತಹ ಪ್ರವೃತ್ತಿಯನ್ನು ಬಲವಾಗಿ ವಿರೋಧಿಸಲಾಗುತ್ತದೆ. ಎಲ್ಲರನ್ನೂ ಗೌರವಿಸುವುದು ಯುಎಇಯ ಮೂಲ ನೀತಿ. ಇದನ್ನು ಉಲ್ಲಂಘಿಸಿದರೆ ಕಠಿಣ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಯುಎಇ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಹಿಂದೆ, ಕುವೈತ್ ನಟಿಯೊಬ್ಬಳು ಪಶ್ಚಿಮದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಡಿಯೋ ಅದರ ಮುಂದುವರಿದ ಭಾಗ ಎಂದು ಮಾಧ್ಯಮಗಳು ಗಮನಸೆಳೆದಿದೆ.

error: Content is protected !! Not allowed copy content from janadhvani.com