janadhvani

Kannada Online News Paper

ಕೋವಿಡ್-19: ಖಾಸಗಿ ಸಂಸ್ಥೆಗಳಿಗೆ ಮತ್ತೆ ರಿಯಾಯಿತಿ ಘೋಷಿಸಿದ ದೊರೆ ಸಲ್ಮಾನ್

ರಿಯಾದ್: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಖಾಸಗಿ ವಲಯದ ಸಂಸ್ಥೆಗಳಿಗೆ ರಿಯಾಯಿತಿಯನ್ನು ಅಲ್ಲಿನ ಸರಕಾರ ಘೋಷಿಸಿದೆ. ಸಂಸ್ಥೆಗಳ ವಿದ್ಯುತ್ ಬಿಲ್‌ನಲ್ಲೂ ವಿನಾಯಿತಿ ನೀಡಲಾಗಿದ್ದು, ಬಾಕಿ ಪಾವತಿಸಲು ಸಮಯಾವಕಾಶ ನೀಡುವುದಾಗಿ ಸರಕಾರ ಘೋಷಿಸಿದೆ. ಇದರ ಭಾಗವಾಗಿ ವಾಣಿಜ್ಯ, ಕೈಗಾರಿಕಾ ಮತ್ತು ಕೃಷಿ ಕ್ಷೇತ್ರಗಳಲ್ಲಿನ ಸಂಸ್ಥೆಗಳಿಗೆ ಶೇ 30 ರಷ್ಟು ರಿಯಾಯಿತಿ ಸಿಗಲಿದೆ.

ಸೌದಿ ದೊರೆ ಸಲ್ಮಾನ್ ಮತ್ತೊಮ್ಮೆ ರಿಯಾಯಿತಿಗಳನ್ನು ಘೋಷಿಸಿದ್ದು, ವಾಣಿಜ್ಯ, ಕೈಗಾರಿಕಾ ಮತ್ತು ಕೃಷಿ ಸಂಸ್ಥೆಗಳಿಗೆ ಈ ಮೂಲಕ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿದ್ಯುತ್ ದರದಲ್ಲಿ ಶೇಕಡಾ 30 ರಷ್ಟು ವಿನಾಯಿತಿ ಲಭ್ಯವಾಗಲಿದೆ. ಮುನದಿನ ಸಂದರ್ಭಗಳನ್ನು ಪರಿಗಣಿಸಿ, ಪ್ರಯೋಜನವನ್ನು ವಿಸ್ತರಿಸುವಂತೆಯೂ ಸೂಚಿಸಲಾಗಿದೆ.

ಅಂತಹ ಸಂಸ್ಥೆಗಳ ವಿದ್ಯುತ್ ಬಿಲ್‌‌ನ ಐವತ್ತು ಶೇಕಡಾ ಸದ್ಯಕ್ಕೆ ಪಾವತಿಸಿ, ಉಳಿದ ಬಾಕಿ ಮೊತ್ತವನ್ನು ಮುಂದಿನ ವರ್ಷದ ಜೂನ್ ವರೆಗೆ ಕಂತುಗಳಲ್ಲಿ ಪಾವತಿಸಲು ಅನುಮತಿಸಲಾಗಿದೆ. ಈ ಅವಧಿಯನ್ನು ಸಂದರ್ಭಗಳಿಗೆ ಅನುಗುಣವಾಗಿ ವಿಸ್ತರಿಸುವಂತೆಯೂ ಸೂಚಿಸಲಾಗಿದೆ.

ಕಂಪನಿಗಳ ಬಾಕಿ ಪಾವತಿಸಲು ಐವತ್ತು ಶತಕೋಟಿ ರಿಯಾಲ್‌ಗಳನ್ನು ಮಂಜೂರು ಮಾಡಲಾಗಿದೆ. ಇದಲ್ಲದೆ, ಕಿಂಗ್ ಸಲ್ಮಾನ್ ಅವರು ಆರೋಗ್ಯ ಸಚಿವಾಲಯಕ್ಕೆ 47 ಬಿಲಿಯನ್ ರಿಯಾಲ್ ತುರ್ತು ಸಹಾಯವನ್ನೂ ಘೋಷಿಸಿದ್ದಾರೆ.

error: Content is protected !! Not allowed copy content from janadhvani.com