janadhvani

Kannada Online News Paper

ಮದೀನಾ ಪರಿಸರದ 6 ಜಿಲ್ಲೆಗಳಲ್ಲಿ 14 ದಿನ 24 ಗಂಟೆಗಳ ಕಾಲ ಕರ್ಫ್ಯೂ

ಮದೀನಾ: ಮದೀನಾದಲ್ಲಿ ಹರಮ್‌ಗೆ ಹೊಂದಿಕೊಂಡಿರುವ ಆರು ಪ್ರಮುಖ ಜಿಲ್ಲೆಗಳಲ್ಲಿ 24 ಗಂಟೆಗಳ ವಿಶೇಷ ಕರ್ಫ್ಯೂ ವಿಧಿಸಲಾಗಿದೆ. ಹರಮ್‌ನ ಪಕ್ಕದಲ್ಲಿರುವ ಆರು ಜಿಲ್ಲೆಗಳ ನಿವಾಸಿಗಳು ತಮ್ಮ ಮನೆಗಳಲ್ಲಿ ನಿರೀಕ್ಷಣೆಯಲ್ಲಿ ಇರಲು ಸೂಚಿಸಲಾಗಿದೆ. ಈ ಆದೇಶ ಶನಿವಾರ ಬೆಳಿಗ್ಗೆ ಆರು ಗಂಟೆಯಿಂದ  ಜಾರಿಗೆ ಬಂದಿದ್ದು, ಮದೀನಾ ಪ್ರಾಧಿಕಾರದ ಈ ನಿರ್ಧಾರವನ್ನು ದಿನದ 24 ಗಂಟೆಗಳ ಕಾಲ 14 ದಿನಗಳವರೆಗೆ ಪಾಲಿಸಬೇಕು.

ಕೆಳಗಿನ ನಕ್ಷೆಯ ಕೆಂಪು ಗಡಿಯೊಳಗೆ ಇರುವ ಎಲ್ಲರಿಗೂ ಈ ಆದೇಶ ಅನ್ವಯಿಸುತ್ತದೆ. ಇದು ಕುರ್ಬಾನ್, ಬನಿ ಝುಫರ್, ಶೂರೈಬಾತ್, ಜುಮುಆ ಬನೀಕುದ್ರಾ ಮತ್ತು ಇಸ್ಕಾನ್‌ನ ಕೆಲವು ಭಾಗಗಳು ಈ ಸರಹದ್ದು ಹೊಂದಿದೆ. ಈ ಪ್ರದೇಶದಲ್ಲಿ ರೋಗವನ್ನು ದೃಢೀಕರಿಸಲಾಗಿಲ್ಲವಾದರೂ, ವೈದ್ಯಕೀಯ ಪರೀಕ್ಷೆಯ ಭಾಗವಾಗಿ ನಿಯಂತ್ರಣದಲ್ಲಿದೆ. ಯಾವುದೇ ಕಾಯಿಲೆ ಇಲ್ಲ ಎಂದು ಖಚಿತಪಡಿಸಲು 14 ದಿನಗಳು ಬೇಕಾಗುತ್ತದೆ. ಅಗತ್ಯ ಸೇವೆಗಳಾದ ಔಷಧಿ, ನೀರು ಮತ್ತು ಆಹಾರಕ್ಕಾಗಿ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಹೊರಗೆ ಬರಲು ಅನುಮತಿಸಲಾಗಿದೆ. ಈ ಪ್ರದೇಶದಲ್ಲಿ ವಾಸಿಸುವ ಸ್ಥಳೀಯರು ಮತ್ತು ವಿದೇಶಿಯರು ಗಡಿಯನ್ನು ದಾಟುವುದು ಮತ್ತು ಹೊರಗಿನವರ ಪ್ರವೇಶ ನಿರ್ಬಂಧಿಸಲಾಗುವುದು. ಈ ಹಿಂದೆ ಘೋಷಿಸಲಾದ ಕರ್ಫ್ಯೂನ ವಿನಾಯಿತಿ ಈ ಪ್ರದೇಶದಲ್ಲಿಯೂ ಅನ್ವಯಿಸುತ್ತದೆ.

error: Content is protected !! Not allowed copy content from janadhvani.com