janadhvani

Kannada Online News Paper

ವಿಮಾನ ರದ್ದು: ಖತರ್ ವಿಸಿಟ್ ವೀಸಾ,1 ತಿಂಗಳ ಸುಲಭ ನವೀಕರಣ

ದೋಹಾ: ಕೋವಿಡ್ 19 ಹರಡುವುದನ್ನು ನಿಯಂತ್ರಿಸುವ ಭಾಗವಾಗಿ ಖತರ್ ವಿಧಿಸಿರುವ ಪ್ರಯಾಣ ನಿರ್ಬಂಧಗಳನ್ನು ಅನುಸರಿಸಿ, ಗೃಹ ಸಚಿವಾಲಯವು ಆನ್ ಅರೈವಲ್, ಕುಟುಂಬ ವಿಸಿಟ್ ವೀಸಾಗಳಲ್ಲಿ ದೇಶದಲ್ಲಿ ಉಳಿದು ಕೊಂಡಿರುವವರಿಗೆ ವೀಸಾ ನವೀಕರಣವನ್ನು ಸುಲಭಗೊಳಿಸಿದೆ.
ಆಂತರಿಕ ಸಚಿವಾಲಯದ ವೆಬ್‌ಸೈಟ್ https://portal.moi.gov.qa/wps/portal/MOIInternet/services/inquiries/visaservices/visitvisaextensionನಲ್ಲಿ ವೀಸಾಗಳನ್ನು ನವೀಕರಿಸಬೇಕಾಗಿದೆ.

ಲಿಂಕ್ ತೆರೆದಾಗ ವೀಸಾ ಸಂಖ್ಯೆ, ಪಾಸ್ಪೋರ್ಟ್ ಸಂಖ್ಯೆ ಮತ್ತು ದೇಶವನ್ನು ನಮೂದಿಸುವ ಆಯ್ಕೆಯನ್ನು ಹೊಂದಿದೆ. ಎಲ್ಲವನ್ನೂ ನಮೂದಿಸಿದ ಬಳಿಕ Extend ಬಟನ್ ಕ್ಲಿಕ್ ಮಾಡಿ.

ಎರಡು ಗಂಟೆಗಳ ನಂತರ ವೀಸಾ ಸೇವೆಗಳ ಆಯ್ಕೆಯನ್ನು ಪರಿಶೀಲಿಸಿದಾಗ ವೀಸಾ ನವೀಕರಿಸಲಾದ ಬಗ್ಗೆ ಮಾಹಿತಿ ಪಡೆಯಬಹುದು. ಒಂದು ತಿಂಗಳವರೆಗೆ ವಿಸ ನವೀಕರಿಸಲಾತ್ತದೆ.

error: Content is protected !! Not allowed copy content from janadhvani.com