janadhvani

Kannada Online News Paper

120 ಬಿಲಿಯನ್ ರಿಯಾಲಿನ ಪ್ಯಾಕೇಜ್- ಲೆವಿ ಪಾವತಿಸದೆ 3 ತಿಂಗಳ ಇಖಾಮಾ ವಿಸ್ತರಣೆ

ರಿಯಾದ್: ಸೌದಿಯಲ್ಲಿ ಕೋವಿಡ್ 19 ವೈರಸ್ ಪರಿಣಾಮವಾಗಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟನ್ನು ಸರಾಗಗೊಳಿಸುವ ಸಲುವಾಗಿ 120 ಬಿಲಿಯನ್ ರಿಯಾಲಿನ ಪ್ಯಾಕೇಜ್ ಅನ್ನು ಸೌದಿ ಸರ್ಕಾರ ಘೋಷಿಸಿದೆ. ಈ ಯೋಜನೆಯನ್ನು ಹಣಕಾಸು ಸಚಿವ ಮತ್ತು ಯೋಜನಾ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ಲಾ ಅಲ್-ಜದನ್ ಘೋಷಿಸಿದ್ದಾರೆ.

ಹೊಸ ಪ್ಯಾಕೇಜ್ ನಲ್ಲಿ ವಲಸಿಗರಿಗೆ ಹೆಚ್ಚು ಅನುಕೂಲಕರವಾದ ಕ್ರಮಗಳು ಒಳಗೊಂಡಿದೆ. ಖಾಸಗಿ ಮತ್ತು ಸಣ್ಣ ಉದ್ಯಮಗಳು ಮತ್ತು ಅವುಗಳ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸಲು ಸರ್ಕಾರ ತುರ್ತು ಯೋಜನೆಗಳನ್ನು ಸಿದ್ಧಪಡಿಸಿದೆ.

ಹಣಕಾಸು ಸಚಿವಾಲಯದ ಹೊಸ ಪ್ರಕಟಣೆಗಳು:

  • 2020 ರ ಜೂನ್ 30 ರವರೆಗೆ, ಇಖಾಮಾ ಅವಧಿ ಹೊಂದಿರುವವರು ಮತ್ತು ಈಗಾಗಲೇ ಇಖಾಮಾ ಅವಧಿ ಮುಗಿದಿರುವವರಿಗೆ ಲೆವಿ ಪಾವತಿಸದೆ ಮೂರು ತಿಂಗಳ ಇಖಾಮಾ ಅವಧಿ ವಿಸ್ತರಿಸಿ ನೀಡಲಾಗುವುದು.
  • ಹೊಸ ಕೆಲಸದ ವೀಸಾಕ್ಕಾಗಿ ಶುಲ್ಕ ಪಾವತಿಸಿದ ನಂತರ, ವೀಸಾ ಸ್ಟ್ಯಾಂಪಿಂಗ್ ಗಾಗಿ ಕಾಯುತ್ತಿರುವವರಿಗೆ ಹಣ ಮರುಪಾವತಿ ಇಲ್ಲವೇ ವೀಸಾ ಸ್ಟ್ಯಾಂಪಿಂಗ್ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗುವುದು.
  • ವೀಸಾ ಸ್ಟ್ಯಾಂಪಿಂಗ್ ಪೂರ್ಣಗೊಂಡವರಿಗೂ ಈ ಪ್ರಯೋಜನ ಲಭಿಸಲಿದೆ.
  • ಮರು ಪ್ರವೇಶ ವೀಸಾ ನೀಡಿದ ನಂತರ ಸೌದಿ ಅರೇಬಿಯಾದಲ್ಲೇ ಉಳಿದಿರುವ ವಿದೇಶಿಯರಿಗೆ ಮರು ಪ್ರವೇಶದ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲು ಉದ್ಯೋಗದಾತರಿಗೆ ಅವಕಾಶವಿದೆ, ಇದಕ್ಕಾಗಿ ಯಾವುದೇ ವಿಶೇಷ ಶುಲ್ಕ ವಿಧಿಸಲಾಗುವುದಿಲ್ಲ. ಸ್ವದೇಶದಲ್ಲಿದ್ದು, ಪ್ರಯಾಣ ಮೊಟಕುಗೊಂಡವರಿಗೂ ಇದು ಅನ್ವಯ.
  • ಮೌಲ್ಯವರ್ಧಿತ ತೆರಿಗೆ, ಅಬಕಾರಿ ತೆರಿಗೆ, ಆದಾಯ ತೆರಿಗೆ ಮತ್ತು ಝಕಾತ್ ಪಾವತಿಸಲು ಮೂರು ತಿಂಗಳ ವಿಳಂಬವನ್ನು ಅನುಮತಿಸಲಾಗಿದೆ.
  • ಮುಂಗಡ ಷರತ್ತುಗಳು ಅನ್ವಯಿಸದೆ ಹೊಸ ಹಣಕಾಸು ವರ್ಷಕ್ಕೆ ನಿಯಂತ್ರಣವಿಲ್ಲದೆ ಝಕಾತ್ ಪ್ರಮಾಣಪತ್ರಗಳನ್ನು ನೀಡಲಾಗುವುದು.
  • ಝಕಾತ್ ಮತ್ತು ಮೌಲ್ಯವರ್ಧಿತ ತೆರಿಗೆಗಳನ್ನು ಗಡುವಾಗಿ ಸ್ವೀಕರಿಸಲಾಗುವುದು.
  • ದೇಶದಲ್ಲಿ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು 30 ದಿನಗಳವರೆಗೆ ವಿಧಿಸಲಾಗುವುದಿಲ್ಲ.
  • ಖಾಸಗಿ ವಲಯದಿಂದ ಪಾವತಿಸಬೇಕಾದ ಸರ್ಕಾರಿ ಸೇವಾ ಶುಲ್ಕ ಮತ್ತು ಪುರಸಭೆಯ ಶುಲ್ಕವನ್ನು ಪಾವತಿಸಲು ಮೂರು ತಿಂಗಳ ಸಮಯನ್ನು ಅನುಮತಿಸಲಾಗಿದೆ.

error: Content is protected !! Not allowed copy content from janadhvani.com