janadhvani

Kannada Online News Paper

ಕುವೈತ್ ಸಿಟಿ: ವಿಮಾನ ಸೇವೆಗಳನ್ನು ರದ್ದುಗೊಳಿಸಿದ ಕಾರಣಕ್ಕಾಗಿ ಊರಲ್ಲೇ ಉಳಿದುಕೊಂಡ ವಿದೇಶಿ ಪ್ರಜೆಗಳಿಗೆ ಇಖಾಮಾ, ವರ್ಕ್ ಪರ್ಮಿಟ್ ನವೀಕರಣಕ್ಕಾಗಿ ಸೌಕರ್ಯವನ್ನು ಕುವೈತ್ ಆಂತರಿಕ ಸಚಿವಾಲಯ ಏರ್ಪಡಿಸಿದೆ.

ವಸತಿ ಇಲಾಖೆಯ ಉಪಕಾರ್ಯದರ್ಶಿ ತಲಾಲ್ ಅಲ್‌ ಮ‌ಅ್‌ರಫಿ ಈ ಬಗ್ಗೆ ಮಾತನಾಡಿ, ಖಾಸಗಿ ವಲಯದ ಕಾರ್ಮಿಕರು ಮತ್ತು ಗೃಹ ಕಾರ್ಮಿಕರ ಇಖಾಮಾವನ್ನು ಅವರು ದೇಶದಲ್ಲಿಲ್ಲದ ಹೊರತಾಗಿಯೂ ನವೀಕರಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

ಭಾರತ ಸೇರಿದಂತೆ ವೈಮಾನಿಕ ಯಾತ್ರಾ ನಿರ್ಬಂಧ ಹೇರಲಾದ ದೇಶಗಳ ನಾಗರಿಕರಿಗೆ ಗೃಹ ಇಲಾಖೆ ವಿನಾಯಿತಿ ನೀಡಿದೆ. ಪ್ರಯಾಣದ ತೊಂದರೆಯಿಂದಾಗಿ ಕುವೈತ್ ತಲುಪಲು ಸಾಧ್ಯವಾಗದ ಕಾರ್ಮಿಕರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಪ್ರಾಯೋಜಕರು ಅಥವಾ ಪ್ರತಿನಿಧಿ ನಿವಾಸ ಇಲಾಖೆಗೆ ತೆರಳಿ ಅವರ ಇಖಾಮಾ ನವೀಕರಿಬಹುದಾಗಿದೆ. ಮಾನವಶಕ್ತಿ ಪ್ರಾಧಿಕಾರದಿಂದ ಕೆಲಸದ ಪರವಾನಗಿಯನ್ನು ನವೀಕರಿಸಿದ ನಂತರ ಇಖಾಮಾ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.

ಪ್ರಾಯೋಜಕರು ಗೃಹ ಕಾರ್ಮಿಕರ ಇಖಾಮಾ ಮತ್ತು ಅವಲಂಬಿತ ವೀಸಾಗಳಲ್ಲಿರುವವರ ಇಖಾಮಾವನ್ನು ನವೀಕರಿಸಬಹುದು. ಅವಲಂಬಿತ ವೀಸಾದ ಪ್ರಾಯೋಜಕರು ವಿದೇಶದಲ್ಲಿದ್ದರೆ ಕುಟುಂಬ ಸದಸ್ಯರಿಗೆ ತಾತ್ಕಾಲಿಕ ವೀಸಾ ನೀಡಲಾಗುವುದು. ಇದಲ್ಲದೆ, ವೀಸಾ ಅವಧಿ ಮುಗಿದ ನಂತರ ದೇಶಕ್ಕೆ ಬಂದವರಿಗೆ ವೀಸಾವನ್ನು 2 ತಿಂಗಳವರೆಗೆ ವಿಸ್ತರಿಸಲಾಗುವುದು.

ಆರು ತಿಂಗಳಿಗಿಂತ ಹೆಚ್ಚು ಕಾಲ ಊರಲ್ಲಿ ಉಳಿದುಕೊಂಡ ಕಾರಣಕ್ಕಾಗಿ ಇಖಾಮಾ ಅಮಾನ್ಯವಾಗುವ ಪರಿಸ್ಥಿತಿಯನ್ನು ತಪ್ಪಿಸಲು ಕಂಪನಿಯ ಪ್ರತಿನಿಧಿಯ ಮೂಲಕ ಮೂರು ತಿಂಗಳ ವಿನಾಯಿತಿಗಾಗಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಗೃಹ ವ್ಯವಹಾರ ಇಲಾಖೆ ಕಾರ್ಮಿಕರಿಗೆ ಒದಗಿಸಿದೆ.

error: Content is protected !!
%d bloggers like this: