janadhvani

Kannada Online News Paper

ಹೆಚ್ಚಿನ ವಿದೇಶೀಗಳು ದುಡಿಯುತ್ತಿರುವ ಒಂಬತ್ತು ವಿಭಾಗಗಳಲ್ಲಿ ದೇಶೀಕರಣ- ವಲಸಿಗರು ಆತಂಕದಲ್ಲಿ

ರಿಯಾದ್: ಸೌದಿ ಅರೇಬಿಯಾ ಇನ್ನೂ ಹೆಚ್ಚು ವಲಯಗಳಲ್ಲಿ ಸ್ವದೇಶೀಕರಣವನ್ನು ಜಾರಿಗೊಳಿಸಲಾಗುತ್ತಿದ್ದು, ವಲಸಿಗರನ್ನು ಆತಂಕಕ್ಕೀಡು ಮಾಡಿದೆ. ದೇಶದ ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಗಳ ವಿವಿಧ ವಿಭಾಗಗಳಲ್ಲಿ ಸೌದೀಕರಣವನ್ನು ಪರಿಚಯಿಸಲು ಮಾನವ ಸಂಪನ್ಮೂಲ ಇಲಾಖೆ ನಿರ್ಧರಿಸಿದೆ.

ಇದು ವರೆಗೂ ಖಾಸಗೀಕರಣವನ್ನು ಪರಿಚಯಿಸದ ಇತರ ಹೊಸ ಪ್ರದೇಶಗಳಲ್ಲೂ ಪರಿಚಯಿಸಲು ಮತ್ತು ಈ ಪ್ರದೇಶದಲ್ಲಿ ಸೌದೀಕರಣದ ಪ್ರಮಾಣವನ್ನು ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಹ್ಮದ್ ಅಲ್‌ರಜ್ಹಿ ಹೇಳಿದರು. ಒಟ್ಟು ಸಿಬ್ಬಂದಿಯ ಪೈಕಿ ದೇಶೀಯ ಅನುಪಾತವನ್ನು 70% ಕ್ಕೆ ಹೆಚ್ಚಿಸಲಾಗುತ್ತದೆ. ಹೊಸ ನಿರ್ಧಾರ ಆಗಸ್ಟ್ 20 ರಿಂದ ಜಾರಿಗೆ ಬರಲಿದೆ.

ಹೊಸ ನಿರ್ಧಾರವು ಭಾರತೀಯರು ಸೇರಿದಂತೆ ಅನೇಕ ವಿದೇಶಿಯರ ಮೇಲೆ ಪರಿಣಾಮ ಬೀರಲಿದೆ. ಚಿಲ್ಲರೆ ಮತ್ತು ಸಗಟು ಕ್ಷೇತ್ರಗಳ ಒಂಬತ್ತು ವಿಭಾಗಗಳಲ್ಲಿ ಹೊಸ ದೇಶೀಕರಣ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಚಹಾ, ಕಾಫಿ, ಖರ್ಜೂರ, ಜೇನು, ಸಕ್ಕರೆ ಸುಗಂಧ ವ್ಯಂಜನ ವಸ್ತುಗಳು, ಪಾನೀಯ ಮತ್ತು ತರಕಾರಿ ಮಾರಾಟ ಮಾಡುವ ಸ್ಥಾಪನೆಗಳಲ್ಲಿಯೂ, ಸಿರಿಧಾನ್ಯಗಳು, ಬೀಜಗಳು, ಹೂವುಗಳು, ಗಿಡಮೂಲಿಕೆಗಳು, ಪುಸ್ತಕಗಳು, ಲೇಖನ ಸಾಮಗ್ರಿಗಳು, ಉಡುಗೊರೆಗಳು, ಕರಕುಶಲ ವಸ್ತುಗಳು, ಪ್ರಾಚೀನ ವಸ್ತುಗಳು, ಆಟಿಕೆಗಳು, ಮಾಂಸ, ಮೀನು, ಮೊಟ್ಟೆ, ಹಾಲು, ಸಸ್ಯಜನ್ಯ ಎಣ್ಣೆ, ಸಾಬೂನು ಮತ್ತು ಪ್ಲಾಸ್ಟಿಕ್ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ಥಾಪನೆಗಳಲ್ಲಿ ಅನುಷ್ಠಾನ ಮಾಡಲಾಗುತ್ತದೆ.

ಅಂತಹ ವಸ್ತುಗಳನ್ನು ಮಾರಾಟ ಮಾಡುವ ಚಿಲ್ಲರೆ ಮತ್ತು ಸಗಟು ಕಂಪನಿಗಳಿಗೆ ಅನ್ವಯಿಸುತ್ತಿದ್ದು, ಈ ಸಂಸ್ಥೆಗಳ ಉದ್ಯೋಗಿಗಳಲ್ಲಿ ಎಪ್ಪತ್ತು ಪ್ರತಿಶತ ಜನರು ಸೌದಿ ಪ್ರಜೆಗಳಾಗಿರಬೇಕು. ಕಾರ್ಮಿಕ ಮಾರುಕಟ್ಟೆಯಲ್ಲಿ ಸ್ಥಳೀಯರ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಇದರ ಉದ್ದೇಶ.

error: Content is protected !! Not allowed copy content from janadhvani.com