janadhvani

Kannada Online News Paper

ಉಮ್ರಾ ಮತ್ತು ಮದೀನಾ ಝಿಯಾರತ್‌ ಗೆ ತಾತ್ಕಾಲಿಕ ತಡೆ: ಷರೀಅತ್ ವಿರುದ್ಧವಲ್ಲ- ಹರಂ ಇಮಾಮ್

ರುಯಾದ್: ಕೊವಿಡ್-19 (ಕರೋನಾ) ರೋಗ ಭೀತಿಯ ಹಿನ್ನೆಲೆಯಲ್ಲಿ ಉಮ್ರಾ ಮತ್ತು ಮದೀನಾ ಝಿಯಾರತ್‌ ಅನ್ನು ತಾತ್ಕಾಲಿಕವಾಗಿ ತಡೆಯುವ ವಿಧಾನವು ಷರಿಯತ್ ಕಾನೂನಿನ ಅನುಸಾರವಾಗಿದೆ ಎಂದು ಮಕ್ಕಾದ ಹರಮ್‌ನಲ್ಲಿ ಕುತುಬಾ ಪ್ರವಚನ ಮತ್ತು ಜುಮುಅ ನಮಾಝಿಗೆ ನೇತೃತ್ವ ವಹಿಸಿದ್ದ ಇಮಾಮ್ ಶೈಖ್ ಅಬ್ದುಲ್ಲಾ ಅಲ್-ಜುಹಾನಿ ಹೇಳಿದ್ದಾರೆ.

ಜನರ ಪ್ರಾಣ ಉಳಿಸುವುದು ಶರಿಯತ್ ಕಾನೂನಿನ ಭಾಗವಾಗಿದೆ. ಆ ಆಧಾರದ ಮೇಲೆ, ನಿರ್ಬಂಧಗಳನ್ನು ಒಳಗೊಂಡಂತೆ ಕೆಲವು ಕಾರ್ಯವಿಧಾನಗಳನ್ನು ಹರಮ್‌ಗಳ ಮೇಲೆ ವಿಧಿಸಲಾಗಿದೆ. ಕೋವಿಡ್ 19 ಸಂಪೂರ್ಣವಾಗಿ ಗುಣಮುಖವಾಗಬೇಕಾದರೆ, ಆರೋಗ್ಯ ನಿರ್ವಹಣೆಯೊಂದಿಗೆ ಸೃಷ್ಟಿಕರ್ತನಾದ ಅಲ್ಲಾಹನೊಡನೆ ಪ್ರಾರ್ಥಿಸಬೇಕು ಎಂದು ಇಮಾಮ್ ತನ್ನ ಪ್ರವಚನದಲ್ಲಿ ಹೇಳಿದರು.

ಮದೀನಾದ ಇಮಾಮ್ ಶೈಖ್ ಡಾ. ಸಲಾಹುಲ್ ಬುದೈರ್ ತಮ್ಮ ಖುತ್ಬಾ ಭಾಷಣದಲ್ಲಿ, ಅಲ್ಲಾಹನ ಪರೀಕ್ಷಣೆಯ ಭಾಗವಾಗಿದೆ ಕೋವಿಡ್ -19 ಎನ್ನುವ ವೈರಸ್. ಇಂತಹ ಕೆಲವು ತೀರ್ಮಾನಗಳನ್ನು ಅಲ್ಲಾಹನು ಕೈಗೊಳ್ಳುತ್ತಾನೆ. ಎಲ್ಲಾ ಮನುಷ್ಯರು ಅಲ್ಲಾಹನ ಕಡೆಗೆ ಹಿಂದಿರುಗಿ ಅಲ್ಲಾಹನ ಭಯದಿಂದ ಬದುಕಬೇಕು. ವೈರಸ್ ವಿರುದ್ಧ ಪ್ರತಿರೋಧ ಒಡ್ಡುವ ಸಲುವಾಗಿ, ಉಮ್ರಾ ಮತ್ತು ಮದೀನಾ ಭೇಟಿಗಳನ್ನು ಸರಕಾರವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದರು.

error: Content is protected !! Not allowed copy content from janadhvani.com