ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಶೈಖುನಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಸಾರಥ್ಯದ ಕೇರಳ ರಾಜ್ಯ ಕಲ್ಲಿಕೋಟೆ ಕಾರಂದೂರು ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವಿಶ್ವ ಖ್ಯಾತಿ ಪಡೆದ ಧಾರ್ಮಿಕ-ಲೌಖಿಕ ಮತ್ತು ವೈದಕೀಯ,ಕಾನೂನು ಶಿಕ್ಷಣ ಸಮುಚ್ಚಯ ಮರ್ಕಝ್ ಸಂಸ್ಥೆಯ 43 ನೇ ವಾರ್ಷಿಕ ಹಾಗೂ ಪದವಿ ಪ್ರಧಾನ ಸಮ್ಮೇಳನವು ಎಪ್ರಿಲ್ ತಿಂಗಳಲ್ಲಿ ನಡೆಯಲಿದ್ದು,ಅದರ ಪ್ರಚಾರಾರ್ಥ ಕಿನ್ಯ ಬುಖಾರಿ ಜುಮುಅ ಮಸ್ಜಿದ್ ನಲ್ಲಿ ದ.ಕ ಸಖಾಫಿ ಕೌನ್ಸಿಲ್ ವತಿಯಿಂದ ಪ್ರಚಾರ ಸಮಾವೇಶವು ನಾಳೆ (08/03/2020) ಆದಿತ್ಯವಾರ ಇಶಾ ನಮಾಝ್ ನಂತರ ಮಸ್ಜಿದ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲೀ ಸಖಾಫಿ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ದ.ಕ ಜಿಲ್ಲಾ ಸಖಾಫಿ ಕೌನ್ಸಿಲ್ ಕಾರ್ಯದರ್ಶಿ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಮರ್ಕಝ್ ಸಂದೇಶ ಭಾಷಣವನ್ನು ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ನಿರ್ವಹಿಸಲಿದ್ದಾರೆ
ಸಮಾವೇಶದಲ್ಲಿ ನಡೆಯುವ ಝಿಕ್ರ್ ಮಜ್ಲಿಸ್,ಅಜ್ಮೀರ್ ಮೌಲಿದ್ ಗಳಿಗೆ ಸಯ್ಯಿದ್ ಅಲವಿ ಅಲ್ ಹೈದ್ರೂಸಿ ತಂಙಳ್ ಹಾಗೂ ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ನೇತೃತ್ವ ನೀಡಲಿದ್ದಾರೆ.
ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದ್ ಸಅದಿ ತಂಙಳ್,ಎಸ್.ವೈ.ಎಸ್ ರಾಜ್ಯ ನಾಯಕ ಇಸ್ಮಾಯಿಲ್ ಸಅದಿ ಕಿನ್ಯ ಸಹಿತ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ