ಭಾರತದಲ್ಲಿ ಮುಸ್ಲಿಮರ ಹತ್ಯಾಕಾಂಡ: ಜಾಗತಿಕ ಮುಸ್ಲಿಮರನ್ನು ನೋಯಿಸುತ್ತಿದೆ- ಇರಾನ್‌ ಸರ್ವೋಚ್ಛ ನಾಯಕ

ಟೆಹರಾನ್,ಮಾ.7: ದೆಹಲಿಯಲ್ಲಿ ಹಿಂದುತ್ವ ಉಗ್ರರಿಂದ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖುಮೇನಿ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಮುಸ್ಲಿಮರ ಮೇಲಿನ ಹಿಂಸಾಚಾರವು ವಿಶ್ವದಾದ್ಯಂತ ಮುಸ್ಲಿಮರನ್ನು ನೋಯಿಸುತ್ತಿದೆ ಎಂದು ಅವರು ಹೇಳಿದರು.

‘‘ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ಜಗತ್ತಿನಾದ್ಯಂತವಿರುವ ಮುಸ್ಲಿಮರ ಹೃದಯಗಳು ರೋದಿಸುತ್ತಿವೆ” “ಹಿಂದುತ್ವ ಉಗ್ರವಾದಿಗಳು ಮತ್ತು ಅವರ ಪಕ್ಷಗಳನ್ನು ಭಾರತ ಸರಕಾರವು ನಿಯಂತ್ರಿಸಬೇಕು ಇಲ್ಲದಿದ್ದಲ್ಲಿ, ಮುಸ್ಲಿಂ ಜಗತ್ತಿನಲ್ಲಿ ಭಾರತವು ಪ್ರತ್ಯೇಕವಾಗಲಿದೆ” ಎಂದು ಅವರು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.

ಈ ಹಿಂದೆ ದೆಹಲಿ ಹತ್ಯಾಕಾಂಡದಲ್ಲಿ ಬ್ರಿಟಿಷ್ ಸಂಸತ್ತು ಕೇಂದ್ರ ಸರ್ಕಾರವನ್ನೂ ಟೀಕಿಸಿತ್ತು. ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್ ನಲ್ಲಿ, ಲೇಬರ್, ಎಸ್ಎನ್ಪಿ ಮತ್ತು ಕನ್ಸರ್ವೇಟಿವ್ ಪಕ್ಷದ ಸಂಸದರು ಭಾರತ ಸರ್ಕಾರವನ್ನು ಟೀಕಿಸಿದರು. ಪೌರತ್ವ ಕಾನೂನಿನ ತಿದ್ದುಪಡಿಯನ್ನು ಬ್ರಿಟಿಷ್ ಸಂಸದರು ದೂಷಿಸಿದರು.

ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿ, ಕೇಂದ್ರಾಡಳಿತವು ನಡೆಸಿದ ನರಮೇಧಕ್ಕೆ ಈವರೆಗೆ 53 ಮಂದಿ ಮೃತಪಟ್ಟು,ನೂರಾರು ಮಂದಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.ಸಾವಿರಾರು ಬಡಕುಟುಂಬಗಳು ಬೀದಿ ಪಾಲಾಗಿವೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!