janadhvani

Kannada Online News Paper

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯ ತನ ಅಭಿಯಾನಕ್ಕೆ ಚಾಲನೆ

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಎಲ್ಲಾ ಸದಸ್ಯರು ಗಳ ಸಭೆ ದಿನಾಂಕ ಮಾರ್ಚ್ 3 ಮಂಗಳವಾರ ಬೆಳಗ್ಗೆ 10.00 ಕ್ಕೆ ಸರಿಯಾಗಿ ಯೆನೆಪೋಯ ಆಡಿಟೋರಿಯಂ ಮೊದಲನೇ ಮಹಡಿ ಯೆನೆಪೋಯ ಆಸ್ಪತ್ರೆ ಕೋಡಿಯಾಲ್ ಬೈಲ್ ಮಂಗಳೂರು ಇಲ್ಲಿ ಜರಗಿತು.

ಈ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಂ ಶಾಫಿ ಸಾದಿಯವರಿಂದ ಜಿಲ್ಲಾ ಕಾರ್ಯಾಧ್ಯಕ್ಷ ಹಾಜಿ ಎಸ್ ಎಮ್ ರಷೀದ್‌ ರವರು ಗೋಲ್ಡನ್ ಮೆಂಬರ್ ಸಿಪ್ ಪಡೆಯುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಚ್ ಐ ಅಬೂಸುಪ್ಯಾನ್ ಮದನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಎಂ ಮುಮ್ತಾಜ್ ಅಲಿ , ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ ,ಸದಸ್ಯ ಸಾದಿಖ್ ಮಾಸ್ಟರ್, ಪುತ್ತೂರು ತಾಲೂಕು ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಆರಿಯಡ್ಕ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್ ಎಮ್ ತಂಞಲ್ , ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್ ಗೂಡಿನ ಬಳಿ, ಜಿಲ್ಲೆಯ, ತಾಲೂಕಿನ ಹಲವಾರು ನಾಯಕರು ಹಾಜರಿದ್ದರು.

ಸಭೆಯಲ್ಲಿ ದೆಹಲಿ ಹತ್ಯಾಕಾಂಡದ ವಿರುದ್ದ ಒಕ್ಕೊರಲಿನಿಂದ ಖಂಡಿಸಲಾಯಿತು ಎಂದು ಜಿಲ್ಲಾ ಕೋ ಆರ್ಡಿನೇಟರ್ ಅಶ್ರಫ್ ಕಿನಾರ ಮಂಗಳೂರು ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com