janadhvani

Kannada Online News Paper

ಸ್ನೇಹಮಯವಾದ ಕೆ.ಸಿ.ಎಫ್ ಸ್ನೇಹಗೂಡು

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಅಲ್ ಕಸೀಮ್ ಝೋನ್ ಸಾರಥ್ಯದಲ್ಲಿ 27-02-2020 ರಂದು ನಡೆದ ಸ್ನೇಹಗೂಡು(ಲೀಡರ್ಸ್ ಕ್ಯಾಂಪ್) ಕಾರ್ಯಕ್ರಮವು ಝೋನ್ ನೇತಾರರುಗಳ ಒಗ್ಗೂಡುವಿಕೆಯಿಂದ ಸ್ನೇಹಮಯವಾಗಿ ವಿಜೃಂಭಣೆಯಿಂದ ನಡೆಯಿತು.

ಕೆ.ಸಿ.ಎಫ್ ಬುರೈದ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ಕರೀಂ ಇಮ್ದಾದಿ ಉಸ್ತಾದರ ಅಧ್ಯಕ್ಷತೆಯಲ್ಲಿ ಕೆ.ಸಿ.ಎಫ್ ದಾಯಿ ಯಾಕೂಬ್ ಸಖಾಫಿ ಉಸ್ತಾದ್ ಉದ್ಘಾಟಿಸಿದರು

ಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ವಿಷಯ ಮಂಡಿಸಿದರು.

ತಮ್ಮ ಸಂಘಟನಾ ಜವಾಬ್ದಾರಿಗಳಿಂದ ನುನುಚಿಕೊಳ್ಳುವ ನೇತಾರರುಗಳ ಇಹ-ಪರದ ಜಯ-ಪರಾಜಯಗಳನ್ನು ಸವಿವರವಾಗಿ ವಿವರಿಸಿ ಅಲ್ಲಾಹುವಿನ ತೃಪ್ತಿಗಾಗಿ ಪೂರ್ವಿಕ ಮಹಾನರುಗಳ ಹಾದಿಯಲ್ಲಿ ಮುನ್ನಡೆದು ಸಂಘಟನೆಯನ್ನು ಬಲಪಡಿಸಬೇಕೆಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೆ.ಸಿ.ಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಪಾರೂಕ್ ಸಅದಿ ಉಸ್ತಾದರು ಬಿನ್ನವಿಸಿದರು.

ಎರಡನೇ ಹಂತದಲ್ಲಿ ನಡೆದ ಇಲಾಖಾವಾರು ಗ್ರೂಪ್ ಚರ್ಚೆಗೆ ಅಶ್ರಪ್ ಕಿಲ್ಲೂರು ಹಾಗೂ ಹಬೀಬುಲ್ಲಾ ಟಿ.ಎಚ್ ತೆಕ್ಕಾರ್ ನೇತೃತ್ವ ನೀಡಿದರು.

ಅಲ್ ಕಸೀಮ್ ಝೋನ್ ಕಾರ್ಯದರ್ಶಿ ಅಬ್ದುಲ್ ಕಾದರ್ ಕಣ್ಣಂಗಾರ್ ಸ್ವಾಗತಿಸಿ ಬಶೀರ್ ಕನ್ಯಾನ ನಿರೂಪಿಸಿದರು.

error: Content is protected !! Not allowed copy content from janadhvani.com