janadhvani

Kannada Online News Paper

ದೆಹಲಿ ಹಿಂಸಾಚಾರ: ಕ್ರಮಕ್ಕೆ ಮುಸ್ಲಿಮ್ ಜಮಾಅತ್ ಆಗ್ರಹ

ಬೆಂಗಳೂರು: ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮುಸ್ಲಿಮ್ ಜಮಾಅತ್ ಆಗ್ರಹಿಸಿದೆ.

ಜಾಗತಿಕ ವೇದಿಕೆಯಲ್ಲಿ ದೇಶದ ಘನತೆಗೆ ಚ್ಯುತಿ ತರುವಂತಹ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟವರು ಎಚ್ಚರಿಕೆ ವಹಿಸಬೇಕು. ಕೋಮುಗಳ ನಡುವೆ ದ್ವೇಷ ಬಿತ್ತುವ ಕೃತ್ಯವನ್ನು ಯಾರು ಮಾಡಿದರೂ ಖಂಡನಾರ್ಹ ಎಂದು ಕೆಎಮ್‌ಜೆ ಹೇಳಿದೆ.

ಹಿಂಸಾಚಾರದ ನಡುವೆಯೂ ದೆಹಲಿಯ ವಿವಿಧೆಡೆ ಹಿಂದೂ ಮುಸ್ಲಿಮರು ಪರಸ್ಪರ ನೆರವಾಗಿ ಸಂರಕ್ಷಕರಾಗಿ ಸೌಹಾರ್ದತೆ ಕಾಪಾಡಿರುವ ಘಟನೆಗಳು ದೇಶದ ಜನತೆಯಲ್ಲಿ ಆಶಾಭಾವನೆ ಮೂಡಿಸಿದೆ ಎಂದು ಕರ್ನಾಟಕ ಮುಸ್ಲಿಮ್ ಜಮಾಅತ್ ಪ್ರಕಟನೆಯಲ್ಲಿ ಅಭಿಪ್ರಾಯಪಟ್ಟಿದೆ.

error: Content is protected !! Not allowed copy content from janadhvani.com