janadhvani

Kannada Online News Paper

ದುಬೈ: ‘ಗ್ರೀನ್ ಟೀ’ ಪೊಟ್ಟಣದಲ್ಲಿ ಹೆರಾಯಿನ್- 10 ವರ್ಷ ಸಜೆ, 50 ಸಾವಿರ ದಿರ್ಹಂ ದಂಡ

ದುಬೈ: ಒಂದು ಕಿಲೋಗ್ರಾಂ ಹೆರಾಯಿನ್‌ನೊಂದಿಗೆ ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದ ಪಾಕಿಸ್ತಾನಿ ಪ್ರಜೆಗೆ ಹತ್ತುವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ 21 ವರ್ಷ ಪ್ರಾಯದವನಾದ ಅರೋಪಿಗೆ 50,000 ರಿಯಾಲ್ ದಂಡವನ್ನೂ ವಿಧಿಸಲಾಗಿದ್ದು, ಶಿಕ್ಷಾ ಕಾಲಾವಧಿ ನಂತರ ಆತನನ್ನು ಗಡಿಪಾರು ಮಾಡಲಾಗುವುದು ಎಂದು ದುಬೈ ಪ್ರಥಮ ನ್ಯಾಯಾಲಯ ವಿಧಿಸಿದೆ.

ಸಂದರ್ಶನ ವಿಸಾದಲ್ಲಿ ಬಂದಿಳಿದ ಆರೋಪಿಯು ಚಹಾ ಪೊಟ್ಟಣದಲ್ಲಿ ಹೆರಾಯಿನ್ ಸಾಗಿಸಿದ್ದ ಎನ್ನಲಾಗಿದೆ. ಬೆಳಗಿನ ಜಾವ ನಾಲ್ಕು ಗಂಟೆಗೆ ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನ ಲಗೇಜ್‌ಗೆ ಮಿತಿಮೀರಿದ ಗಾತ್ರ ಕಂಡು ಸಂಶಯಗೊಂಡ ಕಸ್ಟಮ್ಸ್ ಅಧಿಕಾರಿ ಪರಿಶೀಲನೆ ನಡೆಸಿದಾಗ ಆತನ ಬ್ಯಾಗ್‌ನಲ್ಲಿದ್ದ ಮೂರು ‘ಗ್ರೀನ್ ಟೀ’ ಪೊಟ್ಟಣದಲ್ಲಿ ಲಹರಿ ಪದಾರ್ಥ ಇರುವುದು ಬೆಳಕಿಗೆ ಬಂದಿದೆ.

ಒಟ್ಟು 1.145 ಕಿ.ಗ್ರಾಂ ಲಹರಿ ಪದಾರ್ಥಗಳನ್ನು ಆತನಿಂದ ವಶಪಡಿಸಲಾಗಿದೆ. ನಂತರ ಆರೋಪಿಯನ್ನು ಆ್ಯಂಟಿ ನಾರ್ಕೋಟಿಕ್ ವಿಭಾಗಕ್ಕೆ ಹಸ್ತಾಂತರಿಸಲಾಗಿದ್ದು, ಆರೋಪಿಗೆ ನ್ಯಾಯಾಲಯದ ತೀರ್ಪಿನ ವಿರುದ್ದ ಅಪೀಲ್ ನೀಡುವ ಅವಕಾಶವಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com