ರಿಯಾದ್: ವಿದೇಶಿ ಕಾರ್ಮಿಕರು ಅವಧಿ ಮುಗಿಯು ಕನಿಷ್ಠ ಮೂರು ದಿನಗಳಿಗೆ ಮುಂಚಿತವಾಗಿ ತಮ್ಮ ರೆಸಿಡೆನ್ಸಿ ಐಡೆಂಟಿಟಿ (ಇಖಾಮಾ) ಅನ್ನು ನವೀಕರಿಸಬೇಕು ಮತ್ತು ಇಖಾಮಾವನ್ನು ನವೀಕರಿಸದಿರುವುದು ಕಾನೂನುಬಾಹಿರ ಮತ್ತು ಅಂತಹ ವ್ಯಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಸೌದಿ ಪಾಸ್ಪೋರ್ಟ್ ಪ್ರಾಧಿಕಾರ ಮತ್ತೊಮ್ಮೆ ಎಚ್ಚರಿಸಿದೆ.
ಇಖಾಮಾ ಮುಕ್ತಾಯ ದಿನಾಂಕದ ಮೊದಲು ನವೀಕರಿಸದಿದ್ದರೆ ಮೊದಲ ಬಾರಿಗೆ 500 ರಿಯಾಲ್ ದಂಡ ವಿಧಿಸಲಾಗುತ್ತದೆ. ಪುನರಾವರ್ತಿಸಿದರೆ ದಂಡದ ಮೊತ್ತವು 1000 ರಿಯಾಲ್ ಗೆ ಏರಲಿದೆ ಮತ್ತು ಮೂರನೇ ಅವಧಿ ಮುಗಿಯುವ ಮೊದಲು ಅದನ್ನು ನವೀಕರಿಸದಿದ್ದರೆ, ವಿದೇಶೀಯರನ್ನು ಗಡೀಪಾರು ಮಾಡಲಾಗುತ್ತದೆ ಎಂದು ಪಾಸ್ಪೋರ್ಟ್ ಅಥಾರಿಟಿ ಎಚ್ಚರಿಸಿದೆ.
ಆಂತರಿಕ ಸಚಿವಾಲಯದ ಅಬ್ಶೀರ್ ಪೋರ್ಟಲ್ ಮೂಲಕ ಇಖಾಮಾ ಅವಧಿಯನ್ನು ಪರಿಶೀಲಿಸಿಕೊಳ್ಳಬೇಕು. ಕಾನೂನು ಶಿಕ್ಷೆಯನ್ನು ತಪ್ಪಿಸಲು ಕಾಲಕಾಲಕ್ಕೆ ಇಖಾಮಾವನ್ನು ನವೀಕರಿಸಬೇಕೆಂದು ಸೌದಿ ಪಾಸ್ಪೋರ್ಟ್ ಪ್ರಾಧಿಕಾರವು ಎಲ್ಲಾ ವಿದೇಶಿ ಕಾರ್ಮಿಕರಿಗೆ ಮಾಹಿತಿ ನೀಡಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ