janadhvani

Kannada Online News Paper

ಭಾರತೀಯ ವಾಯುನೆಲೆಯಲ್ಲಿ ಉಚಿತ ವೈಫೈ- ನನೆಗುದಿಗೆ ಬಿದ್ದಿದ್ಧ ಯೋಜನೆಗೆ ಮರು ಜೀವ

ನವದೆಹಲಿ: ವಾಯುಯಾನದ ವೇಳೆ ಉಚಿತ ವೈಫೈ ನೀಡುವ ಮೊದಲ ವಿಮಾನಯಾನ ಕಂಪನಿ ಎಂಬ ಹೆಗ್ಗಳಿಕೆಗೆ ವಿಸ್ತಾರಾ ಏರ್ಲೈನ್ಸ್ ಪಾತ್ರವಾಗಲಿದೆ. ಈ ಕಂಪನಿ ತನ್ನ ನೂತನ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನಗಳಲ್ಲಿ ವಾಯುಯಾನದ ವೇಳೆ ವೈಫೈ ಜೊತೆಗೆ ಉಚಿತ ಸ್ಟ್ರೀಮಿಂಗ್ ವಿಡಿಯೋ ಸೇವೆಯನ್ನು ಶೀಘ್ರದಲ್ಲಿಯೇ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಸೇವೆಯ ಆರಂಭದಿಂದ ವಿಶ್ವದ ಬಿಡುವಿಲ್ಲದ ಮಾರುಕಟ್ಟೆಯಲ್ಲಿ ಪ್ರಿಮಿಯಂ ಏರ್ಲೈನ್ಸ್ ಆಗುವ ಮಹತ್ವಾಕಾಂಕ್ಷೆಯ ಬಲ ಸಿಗಲಿದೆ. ವಿಸ್ತಾರ ವಿಮಾನಯಾನ ಸಂಸ್ಥೆಗೆ ಈ ತಿಂಗಳ ಅಂತ್ಯದವರೆಗೆ ಮೊಟ್ಟಮೊದಲ ಡ್ರೀಮ್ ಲೈನರ್ ವಿಮಾನ ಸಿಗುವ ನಿರೀಕ್ಷೆ ಇದೆ.

ಬುಧವಾರ ನವದೆಹಲಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ವಿಸ್ತಾರಾ ಸಂಸ್ಥೆಯ ಚೀಫ್ ಸ್ಟ್ರಾಟಜಿ ಆಫೀಸರ್ ವಿನೋದ್ ಕಾನನ್, ಈ ಸೇವೆಯನ್ನು ಆರಂಭಗೊಳ್ಳುವುದರಿಂದ ಯಾತ್ರಿಗಳು ಫೇಸ್ ಬುಕ್, ವಾಟ್ಸ್ ಆಪ್ ಗಳಂತಹ ಮೆಸೇಜಿಂಗ್ ಸೇವೆಗಳನ್ನು ಸೇರಿದಂತೆ ಲೈವ್ ಸ್ಟ್ರೀಮ್ ಕ್ರಿಕೆಟ್ ಪಂದ್ಯಗಳನ್ನು ಆನಂದಿಸಬಹುದು. ಅಷ್ಟೇ ಅಲ್ಲ ಲೈವ್ ವಿಡಿಯೋ ಗೇಮ್ ಗಳನ್ನೂ ಸಹ ಆಡಬಹುದು. ಆದರೆ, ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಡೇಟಾ ಖರ್ಚಾಗಲಿದೆ. ಈ ಯಾತ್ರೆಗಾಗಿ ಪ್ರವಾಸಿಗರಿಗೆ ಎಷ್ಟು ಚಾರ್ಜ್ ಮಾಡಬೇಕು ಎಂಬುದರ ನಿರ್ಣಯ ಮುಂಬರುವ ಕೆಲ ವಾರಗಳಲ್ಲಿ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ವಿಸ್ತಾರಾ ಏರ್ಲೈನ್ಸ್ ಸಿಂಗಾಪುರ್ ಏರ್ಲೈನ್ಸ್ ಹಾಗೂ ಟಾಟಾ ಗ್ರೂಪ್ ಸಂಸ್ಥೆಯ ಜಾಯಿಂಟ್ ವೆಂಚರ್ ಆಗಿದ್ದು, 2015ರಲ್ಲಿ ತನ್ನ ವಿಮಾನಯಾನ ಸೇವೆ ಆರಂಭಿಸಿದೆ. ಸದ್ಯ ಇದು 32 ಏರ್ ಬಸ್ ಹಾಗೂ ಬೋಯೀಂಗ್ 737 ಎಸ್ ವಿಮಾನಗಳನ್ನು ಹೊಂದಿದೆ.

ಈ ಕುರಿತು ಮಾತನಾಡಿರುವ ಕಾನನ್, ಪ್ಯಾನಾಸೋನಿಕ್ ಏವಿಯೇಶನ್ ಕಾರ್ಪ್ ಹಾಗೂ ನೆಲ್ಕೋ ಲಿಮಿಟೆಡ್ ಸಂಸ್ಥೆಗಳು ಜಂಟಿಯಾಗಿ ಭಾರತ ಹಾಗೂ ಭಾರತೀಯ ಏರ್ಸ್ಪೇಸ್ ನಲ್ಲಿ ಈ ಸೆಟಲೈಟ್ ಸೇವೆಯನ್ನು ಒದಗಿಸಲಿದ್ದು, ವಿಸ್ತಾರಾ ಏರ್ಲೈನ್ಸ್ ಅದರ ಮೊದಲ ಗ್ರಾಹಕವಾಗಲಿದೆ.

ಭಾರತದಲ್ಲಿ ಹಾರಾಟದ ವೇಳೆ ವೈಫೈ ಸೇವೆ ಆರಂಭಿಸುವ ಯೋಜನೆ 2016ರಿಂದ ನೆನೆಗುದಿಗೆ ಬಿದ್ದಿತ್ತು.

error: Content is protected !! Not allowed copy content from janadhvani.com