janadhvani

Kannada Online News Paper

ಅಬುಧಾಬಿ: ವಾಹನಗಳಿಂದ ಮಾಲಿನ್ಯ ವನ್ನು ಹೊರಗೆ ಎಸೆದರೆ 1000 ದಿರ್ಹಂ ದಂಡ ಮತ್ತು ಆರು ಕಪ್ಪುಚುಕ್ಕೆಗಳನ್ನು ನೀಡಲಾಗುವುದು ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಇದೇ ಅಪರಾಧಕ್ಕಾಗಿ 355 ವಾಹನ ಮಾಲಕರಿಕೆ ದಂಡ ವಿಧಿಸಲಾಯಿತು.

ರಸ್ತೆ ಮತ್ತು ನಗರದ ಪರಿಸರವನ್ನು ಸ್ವಚ್ಛವಾಗಿ ಪರಿಪಾಲಿಸುವುದು ಪ್ರತೀಯೊಬ್ಬರ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ವಾಹನದಿಂದ ಮಾಲಿನ್ಯವನ್ನು ಹೊರಗೆ ಎಸೆಯಬಾರದು, ಅದು ಕಾನೂನು ಉಲ್ಲಂಘನೆಯಾಗಿದೆ. ವಾಹನದ ಇತರ ಯಾತ್ರಿಕರಿಗೆ ಚಾಲಕರು ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಪೊಲೀಸ್ ಟ್ರಾಫಿಕ್ ವಿಭಾಗದ ಡೈರೆಕ್ಟರ್ ಕರ್ನಲ್ ಸೈಫ್ ಹಮದ್ ಅಲ್ ಸಾಬಿ ತಿಳಿಸಿದ್ದಾರೆ.

error: Content is protected !!
%d bloggers like this: