janadhvani

Kannada Online News Paper

ರಿಯಾದ್: ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಮದೀನಾದಲ್ಲಿ ಎರಡು ಹೊಸ ಸೇವಾ ಕೇಂದ್ರಗಳನ್ನು ತೆರೆದಿದೆ. ಯಾತ್ರಿಕರು ತಮಗೆ ಬೇಕಾದ ಎಲ್ಲಾ ಸೇವೆಗಳನ್ನು ಹೊಸ ಕೇಂದ್ರಗಳ ಮೂಲಕ ಪಡೆಯಬಹುದಾಗಿದ್ದು, ಈ ಉದ್ದೇಶಕ್ಕಾಗಿ, ಕೇಂದ್ರಗಳಲ್ಲಿ ವಿವಿಧ ಭಾಷೆಗಳನ್ನು ಮಾತನಾಡುವವರ ಸೇವೆಗಳನ್ನು ಒದಗಿಸಲಾಗುತ್ತಿದೆ.

ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಉತ್ತಮ ಸೇವೆಗಳನ್ನು ಒದಗಿಸುವ ಸಲುವಾಗಿ ‘ಕೇರ್ ಸೆಂಟರ್’ ಕಾರ್ಯಕ್ರಮದಡಿ, ಹೊಸ ಸೇವಾ ಕೇಂದ್ರಗಳು ಕಾರ್ಯಾಚರಿಸಲಿದ್ದು, ವಿಷನ್ 2030ರ ಭಾಗವಾಗಿ ಯಾತ್ರಿಕರಿಗೆ ಉತ್ತಮ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದೆ. ಹೊಸ ಕೇಂದ್ರಗಳು ಬಖೀ ಮತ್ತು ಮದೀನಾ ವಿಮಾನ ನಿಲ್ದಾಣದಲ್ಲಿದ್ದು, ಮೂವತ್ತಕ್ಕೂ ಹೆಚ್ಚು ಸೇವೆಗಳು ಲಭ್ಯವಾಗಲಿದೆ. ಕೇಂದ್ರಗಳಲ್ಲಿ ಸ್ವಯಂ ಸೇವಾ ಯಂತ್ರದ ಮೂಲಕ 16 ಸೇವೆಗಳು ಲಭ್ಯವಿದ್ದು, ಉಳಿದವು ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಲಭ್ಯವಿದೆ.

ಹಜ್ ಮತ್ತು ಉಮ್ರಾ ಯಾತ್ರಾರ್ಥಿಗಳಲ್ಲದೆ, ತಮ್ಮ ವ್ಯವಹಾರಗಳನ್ನು ನಿರ್ವಹಿಸುವ ಕಂಪನಿಗಳಿಗೆ ಬೇಕಾಗುವ ಸೇವೆಗಳೂ ಲಭ್ಯವಾಗಲಿವೆ. ವಿದೇಶಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ವಿಮಾ ರಕ್ಷಣೆಯೂ ಕೇಂದ್ರದ ಮೂಲಕ ಲಭ್ಯವಿರುತ್ತದೆ. ಕೇಂದ್ರಗಳು ವಿವಿಧ ಭಾಷೆಗಳನ್ನು ಮಾತನಾಡುವವರ ಸೇವೆಯನ್ನು ಹೊಂದಿವೆ. ಬೆರಳಚ್ಚು ಮೂಲಕ ಯಾತ್ರಿಕರ ಡೇಟಾವನ್ನು ಪತ್ತೆಹಚ್ಚುವ ಸಾಮರ್ಥ್ಯವೂ ಈ ಕೇಂದ್ರದಲ್ಲಿದೆ.

error: Content is protected !!
%d bloggers like this: