janadhvani

Kannada Online News Paper

ಶಾರ್ಜಾ ಶೈಖ್ ಅಧೀನದಲ್ಲಿ ಇಸ್ಲಾಮಿಕ್ ಅಧ್ಯಯನ ಕಾನ್ಪೆರೆನ್ಸ್‌- ಭಾರತದ ಗ್ರ್ಯಾಂಡ್ ಮುಫ್ತಿಯಿಂದ ತರಗತಿ

ಶಾರ್ಜಾ: ಶಾರ್ಜಾ ಆಡಳಿತಾಧಿಕಾರಿ ಶೈಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿಯವರ ಅಧೀನದಲ್ಲಿ ನಡೆಸಲಾಗುವ ಇಸ್ಲಾಮಿಕ್ ಉಲಮಾ ಅಧ್ಯಯನ ಕಾನ್ಪೆರೆನ್ಸ್‌ಗೆ ನೇತೃತ್ವ ನೀಡಲು ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದರನ್ನು ಆಮಂತ್ರಿಸಲಾಗಿದೆ.

ಶಾರ್ಜಾದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅಲ್ಲಿನ ಇಮಾಮರುಗಳು, ಮುಫ್ತಿಗಳು ಖತೀಬ್‌ಗಳು, ಉನ್ನತ ಸರಕಾರಿ ಉದ್ಯೋಗಸ್ಥರು ಭಾಗವಹಿಸಲಿದ್ದಾರೆ.

ಫೆಬ್ರವರಿ 17, 18, 19 ಈ ಮೂರು ದಿನಗಳಲ್ಲಿ “ಸಿಹಾ ಹುಸಿತ್ತ” ಹದೀಸ್ ಗ್ರಂಥಗಳ ಅಧ್ಯಯನ ತರಗತಿ ನಡೆಯಲಿದ್ದು , ಫೆಬ್ರವರಿ 18 ರಂದು ಶೈಖುನಾ ಎ.ಪಿ ಉಸ್ತಾದರು ಸುನನು ನಸಾಯೀ, ಸುನನು ತಿರ್ಮುದ್ಸೀ ಬಗ್ಗೆ ತರಗತಿ ನಡೆಸಲಿದ್ದಾರೆ.

ನಿರಂತರ ಆರು ದಶಕಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಬುಖಾರಿ ಕ್ಲಾಸ್ ನಡೆಸುತ್ತಿರುವ ಶೈಖುನಾ ಎ.ಪಿ ಉಸ್ತಾದರ ಸಾಧನೆ ಮನಗಂಡು ದುಬೈ ಸರಕಾರ ಅವರಿಗೆ ಈ ಮಹತ್ವದ ವೇದಿಕೆ ನೀಡಿದೆ.

error: Content is protected !! Not allowed copy content from janadhvani.com