‘ದ್ವೇಶ ಬಿಟ್ಟು ದೇಶ ಕಟ್ಟು’ ಎಂಬ ಮುಖ್ಯ ಘೋಷಣೆಯಡಿಯಲ್ಲಿ ಫೆಬ್ರವರಿ 20 ವಿಶ್ವ ಸಾಮಾಜಿಕ ನ್ಯಾಯ ದಿನದಂದು ಆರಂಭಗೊಂಡು ಎಪ್ರಿಲ್ 14 ರ ಅಂಬೇಡ್ಕರ್ ಜಯಂತಿಯಂದು ಸಮಾರೋಪಗೊಳ್ಳುವ 55 ದಿನಗಳ ‘ಪ್ರಜಾಭಾರತ’ ಅಭಿಯಾನವನ್ನು ಯಶಸ್ವಿಗೊಳಿಸಲು ಸುನ್ನೀ ಕೊ-ಆರ್ಡಿನೇಶನ್ ಕರೆ ನೀಡಿದೆ.

ಕರ್ನಾಟಕ ಮುಸ್ಲಿಂ ಜಮಾಅತ್ ಇದರ ರಾಜ್ಯ ಸಮಿತಿ ಹಮ್ಮಿಕೊಂಡಿರುವ ಪ್ರಸ್ತುತ ಅಭಿಯಾನ ರಾಜ್ಯಾಧ್ಯಂತ ಎಲ್ಲಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ನಡೆಯಲಿದ್ದು, ‘ ನಮ್ಮ ಭಾರತ’, ‘ಧರ್ಮ ಸೌಹಾರ್ದತೆಯೇ ಭಾರತೀಯತೆ’, ‘ಶೋಷಿತರ ಬದುಕು-ಭವಿಷ್ಯ’, ಸಂವಿಧಾನ ಸಂಕಷ್ಟ ಮತ್ತು ಸಂರಕ್ಷಣೆ’ ಎಂಬ ವಿಷಯಗಳು ಚರ್ಚಿಸಲ್ಪಡಲಿದೆ.
ವಿವಿಧ ಧರ್ಮಗಳ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಪಾಳ್ಗೊಳ್ಳುವ ಈ ಅಭಿಯಾನದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕೆಂದು ಸುನ್ನೀ ಕೊ-ಆರ್ಡಿನೇಶನ್ ವಿನಂತಿಸಿದೆ.
ಬಂಟ್ವಾಳದ ಅಲ್ ಹಸನಾತ್ ನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕೊ-ಆರ್ಡಿನೇಶನ್ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ, ಇಸ್ಮಾಈಲ್ ತಂಙಳ್ ಉಜಿರೆ, ಮನ್ಶರ್ ತಂಙಳ್, ಶಾಫಿ ಸಅದಿ, ಆತೂರು ಸಅದ್ ಮುಸ್ಲಿಯಾರ್, ಕೆ.ಕೆ.ಎಂ ಸಖಾಫಿ, ಜೆಪ್ಪು ಮದನಿ, ಸಿರಾಜ್ ಸಖಾಫಿ ಕನ್ಯಾನ, ಹಮೀದ್ ಬಜ್ಪೆ, ಕೆ.ಎಂ ಸಿದ್ದೀಕ್, ಯಾಕೂಬ್ ಸಅದಿ, ಸುಫಿಯಾನ್ ಸಖಾಫಿ, ಸಾದಿಖ್ ಮಲೆಬೆಟ್ಟು, ಅಶ್ರಫ್ ಕಿನಾರ, ಕಲ್ಕಟ್ಟ ರಝ್ವಿ ಮುಂತಾದವರು ಭಾಗವಹಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ