janadhvani

Kannada Online News Paper

ಸೌದಿ: ಕರೆನ್ಸಿ ನೋಟುಗಳಿಗೆ ಗೀಚಿದರೆ 5 ವರ್ಷಗಳ ಕಾರಾಗೃಹ

ರಿಯಾದ್(ಜನಧ್ವನಿ ವಾರ್ತೆ):ಕರೆನ್ಸಿ ನೋಟುಗಳನ್ನು ಅಜಾಗರೂಕತೆಯಿಂದ ಉಪಯೋಗಿಸುವವರ  ವಿರುದ್ದ ಉಗ್ರ ಎಚ್ಚರಿಕೆಯೊಂದಿಗೆ ಸೌದಿ ಸಾರ್ವಜನಿಕ ಪ್ರಾಸಿಕ್ಯೂಶನ್. ಉದ್ದೇಶಪೂರ್ವಕವಾಗಿ ನೋಟುಗಳಲ್ಲಿ ಗೀಚುವ ಮೂಲಕ ಅದಕ್ಕೆ ಕುಂದು ಉಂಟುಮಾಡುವವರಿಗೆ ಪ್ರೋಸಿಕ್ಯೂಷನ್ ಎಚ್ಚರಿಕೆಯನ್ನು ನೀಡಿದೆ.

ನೋಟುಗಳ ಆಕೃತಿಗೆ ದಕ್ಕೆ ಉಂಟಾಗುವಂತಹ ರೀತಿಯಲ್ಲಿ  ಉದ್ದೇಶಪೂರ್ವಕವಾಗಿ ವಿಕೃತಗೊಳಿಸುವವರು 5 ವರ್ಷಗಳ ಜೈಲು ಶಿಕ್ಷೆ ಅನುಭವಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ನೋಟುಗಳನ್ನು ವಿಕೃತಗೊಳಿಸುವುದು, ಹರಿಯುವುದು, ಅದರ ಆಕೃತಿಯನ್ನು ಬದಲಾಯಿಸುವುದು, ಕೆಮಿಕಲ್ ಉಪಯೋಗಿಸಿ ತೊಳೆಯುವುದು, ಯಾವುದಾದರೂ ರೀತಿಯಲ್ಲಿ ನಾಶ ಪಡಿಸುವುದು ಮುಂತಾದವುಗಳು 5 ವರ್ಷಗಳ ಕಾರಾಗೃಹ ಅನುಭವಿಸಬೇಕಾದ ಅಪರಾಧವಾಗಿದೆ. ನೋಟುಗಳನ್ನು ನಾಶ ಪಡಿಸುವವರಿಗೆ ನಖಲಿ ಕರೆನ್ಸಿ ನಿರ್ಮಾಣಕ್ಕೆ ವಿಧಿಸಲಾಗುವ  ಅಪರಾಧವನ್ನು ಹೊರಿಸಿ 10,000 ರಿಯಾಲ್ ದಂಡ ಕೂಡಾ ವಿಧಿಸಲಾಗುತ್ತದೆ.

error: Content is protected !! Not allowed copy content from janadhvani.com