ರಿಯಾದ್: ಪ್ರಾಮಾಣಿಕತೆಯಿಂದ ಬದುಕಿದವರು ಜೀವನದುದ್ದಕ್ಕೂ ಯಶಸ್ವಿಯಾಗಿದ್ದಾರೆ. ಪ್ರಾಮಾಣಿಕತೆಯು ಆತ್ಮಸ್ಥೆಯ೯ವನ್ನು ಹೆಚ್ಚಿಸುತ್ತದೆ ಮತ್ತು ಪರಲೋಕ ವಿಜಯಕ್ಕೂ ಕಾರಣವಾಗುತ್ತದೆ ಎಂದು ಕೆ.ಸಿ.ಎಫ್ ಅಂತರ್ರಾಷ್ಟ್ರಿಯ ಸಮಿತಿ ಅಧ್ಯಕ್ಷರಾದ ಡಾ.ಶೇಖ್ ಬಾವಾ ಹೇಳಿದರು.
KCF ಅಲ್ ಕಸೀಮ್ ಝೋನ್
ಅಧೀನದಲ್ಲಿ 3-01-2020 ಶುಕ್ರವಾರದಂದು ಅಲ್ ಮಿಸ್ಬಾ ಆಡಿಟೋರಿಯಂನಲ್ಲಿ ನಡೆದ ಡೆಲಿಗೆಟ್ಸ್ ಮೀಟ್ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಮನುಷ್ಯ ಜೀವನ ಪರಾಜಯದ 11 ಕಾರಣಗಳನ್ನು ಸವಿಸ್ತಾರವಾಗಿ ಪ್ರೇಕ್ಷಕರಿಗೆ ವಿವರಿಸಿದರು.

ಕೆ.ಸಿ.ಎಫ್ ಇಹ್ಸಾನ್, ಹಾಗೂ ಮಂಗಳೂರಿನಲ್ಲಿ ನಿಮಾ೯ಣ ಹಂತದಲ್ಲಿರುವ ಮರ್ಕಝಲ್ ಇಸ್ಲಾಂ ಕಲ್ಚರಲ್ ಸೆಂಟರ್ ಬಗ್ಗೆ ಮಾಹಿತಿ ನೀಡಿದರು
ಸಯ್ಯಿದ್ ಜಾಫರ್ ಸ್ವಾದಿಕ್ ತಂಙಳ್’ರವರ ದುವಾದೊಂದಿಗೆ ಪ್ರಾರಂಭಗೊಂಡು ಕೆ.ಸಿ.ಎಫ್ ಅಲ್ ಕಸೀಮ್ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಹಸನ್ ಮದನಿ ಮಂಡೆಕೋಲು ಅಧ್ಯಕ್ಷತೆ ವಹಿಸಿ, ಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಉದ್ಘಾಟಿಸಿದರು.

ಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಶೇಖ್ ಬಾವರವರಿಗೆ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ICF ಚೇರ್ಮ್ಯಾನ್ ಇಬ್ರಾಹಿಂ ಸಖಾಫಿ RSC ನೇತಾರ ಶಮೀರ್ ಸಖಾಫಿ ,ಬಶೀರ್ ಹಾಗೂ ಉಲಮಾ ಉಮರಾ ನೇತಾರರುಗಳು ಮತ್ತು ಕೆ.ಸಿ.ಎಫ್ ಝೋನ್, ಸೆಕ್ಟರ್, ಯೂನಿಟ್ ಪದಾಧಿಕಾರಿಗಳು ಭಾಗವಹಿಸಿದರು.

KCF ಅಲ್ ಕಸೀಮ್ ಝೋನ್ ದಾಯಿ ಯಾಕೂಬ್ ಸಖಾಫಿ ಸ್ವಾಗತಿಸಿ ಬಶೀರ್ ಕನ್ಯಾನ ವಂದಿಸಿ ನಿರೂಪಿಸಿದರು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ