ರಿಯಾದ್ : ಮಜ್ಲಿಸ್ ಅಶ್ಶಿಫ್ಫಾ ಆದೂರು ಇದರ ರಿಯಾದ್ ಘಟಕ ವತಿಯಿಂದ ಸ್ನೇಹ ತೀರ ಕಾರ್ಯಕ್ರಮ ರಿಯಾದ್ ನ ಅಪೊಲ್ಲೊ ದಿಮೋರ್ ಹೋಟೆಲ್ ನಲ್ಲಿ ಶುಕ್ರವಾರ
ನಡೆಯಿತು.

ಕಾರ್ಯಕ್ರಮವನ್ನು ಐಸಿಎಫ್ ನ ಲುಕ್ಮಾನ್ ಪಯ್ಯೂರ್ ಉದ್ಘಾಟಿಸಿದರು. ನಂತರ ಅಬ್ದುಲ್ಲಾ ಸಖಾಫಿ ಮಲಪುರಂ ನಬಿಯವರ ಮೇಲಿನ ಪ್ರೀತಿಯ ಮಹತ್ವದ ಬಗ್ಗೆ ಪ್ರಭಾಷಣ ನಡೆಸಿದರು.


ಮುಡಿಪು ಎಜುಪಾರ್ಕ್ ರೂವಾರಿ ಸಯ್ಯಿದ್ ಮುಹಮ್ಮದ್ ಅಶ್ರಫ್ ತಂಙಳ್ ಸಖಾಫ್ ಅಲ್ ಮದನಿ ದುವಾ ನೆರವೇರಿಸಿ ಮಾತನಾಡಿದರು. ರಬೀಉಲ್ ಅವ್ವಲ್ ಮಾಸವು ಹೃದಯ ಶುದ್ದಿ ಹಾಗೂ ಪಾಪ ಮೋಚನೆಗೆ ಕಾರಣವಾಗಿದೆ, ಎಂದ ಅವರು, ಮಜ್ಲಿಸ್ ನ ಕಾರ್ಯವೈಖರಿ, ವಯಸ್ಕರ ಖುರಾನ್ ಶಿಕ್ಷಣ ಹಾಗೂ ಮಕ್ಕಳ ಝಹ್ರತುಲ್ ಖುರಾನ್ ತರಗತಿಯ ಬಗ್ಗೆ ವಿವರಿಸಿದರು.

ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷ ಫಾರೂಕ್ ಸಅದಿ ಅವರು ಸಯ್ಯದ್ ಕುಟುಂಬದ ಮಹತ್ವದ ಬಗ್ಗೆ ವಿವರಿಸಿದರು. ಸ್ವಾಗತ ಸಮಿತಿ ಚೇರ್ಮನ್ ಸಿತಾರ್ ಮುಹಮ್ಮದ್ ಹಾಜಿ, ದಾವೂದ್ ಸಅದಿ, ಅಬ್ದುಲ್ ರಜಾಕ್ ಹಾಜಿ, ಹುಸೈನಾರ್ ಉಸ್ತಾದ್, .ಅಬ್ದುಲ್ ಲತೀಫ್ ಯುನಿವರ್ಸಲ್, ಡಾ ಅಬ್ದುಲ್ ಮೊಯೀನ್ ಎಸ್. ಬ್ಯಾರಿ, ನವಾಝ್ ದೀರಾ, ಅಬ್ದುಲ್ ಜಲೀಲ್, ಹಂಝ ಉಸ್ತಾದ್ ಪೊನ್ನಂಪೇಟೆ ಮತ್ತಿತರರು ಉಪಸ್ಥಿತರಿದ್ದರು. ಇಲ್ಯಾಸ್ ಲತೀಫಿ ಖಿರಾತ್ ಪಠಿಸಿದರು.
ನಿಝಾಂ ಸಾಗರ್ ಸ್ವಾಗತಿಸಿದರು. ಅಶ್ರಫ್ ಮದನಿ ಮಡಂತ್ಯಾರ್ ವಂದಿಸಿದರು.
ವರದಿ- ಹಕೀಂ ಬೋಳಾರ್















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ