ದಮಾಮ್: ಮಜ್ಲಿಸ್ ಶಿಫಾ ಅಸ್ಸಖಾಫ ಅಲ್ ಇಸ್ಲಾಮಿ ಆದೂರು ಇದರ ದಮಾಮ್ ಘಟಕದ ವತಿಯಿಂದ ಮಜ್ಲಿಸೆ ಮಹಬ್ಬಾ ಕಾರ್ಯಕ್ರಮ ದಮಾಮಿನ ಹೋಲಿಡೇಸ್ ಹೋಟೆಲ್ ನಲ್ಲಿ ಗುರುವಾರ ನಡೆಯಿತು.

ಸಯ್ಯಿದ್ ಅಶ್ರಫ್ ಅಸ್ಸಖಾಫ್ ಆದರೂ ತಂಙಳ್ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದು, ಲೋಕದಲ್ಲಿ ಅತ್ಯುತ್ತಮ ಸ್ವಭಾವದ ವ್ಯಕ್ತಿಯೊಬ್ಬರಿದ್ದರೆ ಅದು ಮುಹಮ್ಮದ್ ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಆಗಿದ್ದಾರೆ ಎಂದು ಖುರಾನಿನ ಆಯತ್ ಸಮರ್ಥಿಸಿ ಮಾತನಾಡಿದರು.
ಯೂಸುಫ್ ಸಅದಿ ಅಯ್ಯಂಗೇರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಅದ್ ಅಮಾನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಬಿಯವರ ಸ್ವಭಾವವನ್ನು ಅನುಸರಿಸುತ್ತಾ, ಅವರ ಆದೇಶದಂತೆ ನಡೆದ ,ನಬಿ ಯವರ ಗೆಳೆಯ ಅಬೂಬಕ್ಕರ್ ಸಿದ್ದೀಕ್ (ರ.ಅ) ಗೆಳೆತನದ ಬಗ್ಗೆ ವಿವರಿಸಿದರು. ವಿಷಪೂರಿತ ಹಾವಿನ ಕಡಿತಕ್ಕೊಳಗಾದರೂ, ಸ್ನೇಹಿತನ ನಿದ್ದೆ ಗೆ ಭಂಗವಾಗದಿರಲಿ ಎಂಬ ಕಾರಣಕ್ಕೆ ನೋವಿನಲ್ಲೂ ಕಣ್ಣೀರು ಹಾಕಲು ಹಿಂದೇಟು ಹಾಕಿದ ಆ ಗೆಳೆತನ ನಮಗೆ ಮಾದರಿಯಾಗಿದೆ ಎಂದರು.

ವೇದಿಕೆಯಲ್ಲಿ ಜಾಫರ್ ತಂಙಳ್ ಕಾಸರಗೋಡು, ಅಬ್ದುಲ್ ಖಾದರ್ ಸಅದಿ ಆದೂರು,ದಮಾಮ್ ಘಟಕದ ಅಧ್ಯಕ್ಷ ಖಾಸೀಂ ಹಾಜಿ ಅಡ್ಡೂರು, ಮುಹಮ್ಮದ್ ಸಅದಿ ಪಡಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಹಕೀಂ ಬೋಳಾರ್















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು