ರಿಯಾದ್: ಸೌದಿ ಅರೇಬಿಯಾ ಒಂದು ರಿಯಾಲ್ ಮೌಲ್ಯದ ಕಾಗದದ ಕರೆನ್ಸಿಗಳನ್ನು ಹಿಂತೆಗೆದುಕೊಳ್ಳುತ್ತಿದ್ದು, ಬದಲಾಗಿ ಹೆಚ್ಚಿನ ನಾಣ್ಯಗಳನ್ನು ಮಾರುಕಟ್ಟೆಗೆ ಇಳಿಸಲು ಯೋಜಿಸಿದೆ. ಕಾಗದದ ಕರೆನ್ಸಿಗಳಿಗೆ ಹೆಚ್ಚಿನ ಬಾಳಿಕೆ ಇಲ್ಲ ಎಂಬ ಕಾರಣಕ್ಕೆ ಈ ಕ್ರಮ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಅರೇಬಿಯನ್ ಮಾನಿಟರಿಂಗ್ ಏಜೆನ್ಸಿ (ಸಾಮಾ) ಒಂದು ರಿಯಾಲ್ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವ ಮತ್ತು ನಾಣ್ಯಗಳಿಗಳನ್ನು ವಿನಿಮಯ ಮಾಡುವ ಯೋಜನೆಯನ್ನು ಪ್ರಕಟಿಸಿದೆ. 700 ಮಿಲಿಯನ್ ಮೌಲ್ಯದ ನಾಣ್ಯಗಳನ್ನು ಮಾರುಕಟ್ಟೆಗೆ ತರಲಾಗುತ್ತಿದ್ದು, ಇದು ಒಟ್ಟು ಮಾರುಕಟ್ಟೆಯಲ್ಲಿರುವ ಕರೆನ್ಸಿಯ ನಾಲ್ಕನೇ ಒಂದು ಭಾಗವಾಗಿದೆ. ನಾಣ್ಯಗಳ ಬಾಳಿಕೆ ಕಾಗದದ ಕರೆನ್ಸಿಗಳಿಂತ ಹೆಚ್ಚು ಕಾಲ ಇರುತ್ತದೆ ಎಂದು ಸಾಮ ಪೂರ್ವದ ಪ್ರಾಂತೀಯ ನಿರ್ದೇಶಕ ಮುಹಮ್ಮದ್ ಅಲ್ ನಯೀಮ್ ಹೇಳಿದರು.
ಕಾಗದದ ಕರೆನ್ಸಿಗಳ ಬದಲಿಗೆ ಹೆಚ್ಚಿನ ನಾಣ್ಯಗಳನ್ನು ಮಾರುಕಟ್ಟೆಗೆ ತರಲಾಗಿದೆ. ಲಭ್ಯತೆಯ ದೃಷ್ಟಿಯಿಂದ ಇನ್ನಷ್ಟು ನಾಣ್ಯಗಳನ್ನು ವಿತರಿಸಲಾಗುವುದು ಎಂದು ಮುಹಮ್ಮದ್ ಅಲ್-ನಯೀಮ್ ಹೇಳಿದರು. ಒಂದು ರಿಯಾಲ್ ಕಾಗದದ ಕರೆನ್ಸಿಗಳನ್ನು ಸಂಪೂರ್ಣವಾಗಿ ಮಾರುಕಟ್ಟೆಯಿಂದ ಹಿಂಪಡೆದು ಬದಲಿಗೆ ನಾಣ್ಯಗಳನ್ನು ಹೊರತರಲು ಯೋಜನೆ ಇದೆ ಎಂದು ನಯೀಂ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು