ನಿಂತಿಕಲ್ಲು : SSF ನಿಂತಿಕ್ಕಲ್ಲು ಸೆಕ್ಟರ್ ವತಿಯಿಂದ ನಡೆದ ನವ ಬದುಕಿಗೊಂದು ದಿಕ್ಸೂಚಿ ಉಲಾಝ್ ಕ್ಯಾಂಪ್ – 2019 ಕಾರ್ಯಕ್ರಮವೂ ಸೆಪ್ಟೆಂಬರ್ 30 ಸೋಮವಾರ ಮಗ್ರಿಬ್ ನಮಾಜಿನ ಬಳಿಕ ನಿಂತಿಕ್ಕಲ್ಲು SSF ಕಚೇರಿಯಲ್ಲಿ ಸೆಕ್ಟರ್ ಅಧ್ಯಕ್ಷರಾದ ಜಬ್ಬಾರ್ ಹನೀಫಿ ಅವರ ಅಧ್ಯಕ್ಷತೆಯಲ್ಲಿ ಅತಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು SSF ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹುರಿ ನೆಕ್ಕಿಲ ಉದ್ಘಾಟಿಸಿದರು. ನಂತರ ನಡೆದ ಉಸ್ತಾದ್ ಝಿಯಾದ್ ಸಖಾಫಿ ಬಾರೆಬೆಟ್ಟು ಅವರ ಸುನ್ನತ್ ಹಾಗೂ ದಾಈ ಎಂಬ ವಿಷಯದ ಕುರಿತ ತರಗತಿಯೂ ಕಾರ್ಯಕರ್ತರಿಗೆ ಹೊಸ ಹುರುಪನ್ನು ನೀಡಿತು.
ನಂತರ ನೆರೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾರ್ಯ ನಿರ್ವಹಣೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡ ಸೆಕ್ಟರ್ ವ್ಯಾಪ್ತಿಯ ಕಾರ್ಯಕರ್ತರಾದ ಅಬೂಬಕ್ಕರ್ ನೆಕ್ಕಿಲ, ರಝಾಕ್ ಕೆ.ಎಚ್ ನೆಕ್ಕಿಲ, ಅಬೂತಾಹಿರ್ ನೆಕ್ಕಿಲ, ಸಂಶುದ್ದೀನ್ ನೆಕ್ಕಿಲ, ಮುಸ್ತಫಾ ಸಮಹಾದಿ, ರಿಯಾಝ್ ನೆಕ್ಕಿಲ, ಸ್ವಾದಿಕ್ ನೆಕ್ಕಿಲ ಅವರಿಗೆ ಸೆಕ್ಟರ್ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ನಿಂತಿಕಲ್ಲು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ರಹ್ಮಾನ್ ಟಿ ಎಸ್ ಎಣ್ಮೂರು ಸ್ವಾಗತಿಸಿದರು ಕಾರ್ಯಕ್ರಮವನ್ನು ಸೆಕ್ಟರ್ ಪ್ರ. ಕಾರ್ಯದರ್ಶಿ ರಿಯಾಝ್ ನೆಕ್ಕಿಲ ಅವರು ವಂದಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ನಿಂತಿಕಲ್ಲು ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಪೊಲಾಜೆ, SYS ಕಾರ್ಯಕರ್ತರಾದ ಅಝೀಝ್ ಮುಸ್ಲಿಯಾರ್ ಕಲ್ಲೇರಿ ಮತ್ತು ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಪಿ ಎಂ ಎಸ್ ಪಡುಬಿದ್ರಿ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ