ಜಿದ್ದಾ : ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ವತಿಯಿಂದ ಅಭಿನಂದನಾ ಕಾರ್ಯಕ್ರಮ ದಿನಾಂಕ 13/09/2019 ರಂದು ಜಿದ್ದಾ ಶರಫಿಯಾದ ರಾರಾ ಅವಿಸ್ ಅಡಿಟೊರಿಯಂನಲ್ಲಿ ನಡೆಯುತು.
ಸೈಯದ್ ಝಕರಿಯ ತಂಙಳ್ ನಾವುಂದ ರವರ ದುವಾ ದೊಂದಿಗೆ ಆರಂಭವಾದ ಸಭೆಯಲ್ಲಿ, ಸುಲೈಮಾನ್ ಹನೀಫಿಯವರು ಕಿರಾಅತ್ ಪಠಿಸಿದರು, ಉದ್ಘಾಟನೆಯನ್ನು ಜಿದ್ದಾ ಝೊನ್ ಅಧ್ಯಕ್ಷರಾದ ಸಿಎಚ್ ಅಬ್ದುಲ್ಲ ಸಖಾಫಿ ಯವರು ನೆರವೇರಿಸಿದರು.
ಅಧ್ಯಕ್ಷತೆಯನ್ನು ಕೆಸಿಎಫ್ ಸೌದಿಅರೇಬಿಯ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ವಹಿಸಿದ್ದರು.



ಈ ಸಂದರ್ಭದಲ್ಲಿ ಕೆಸಿಎಫ್ ಅಂತರ್‌ರಾಷ್ಟ್ರೀಯ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಜನಾಬ್ ಖಮರುದ್ದೀನ್ ಗೂಡಿನಬಳಿ ಮತ್ತು ಇಹ್ಸಾನ್ ಅಧ್ಯಕ್ಷರಾಗಿ ಆಯ್ಕೆಯಾದ ಜನಾಬ್ ಅಬೂಬಕ್ಕರ್ ರೈಸ್ಕೊ ಪಡುಬಿದ್ರಿ ಯವರನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ವತಿಯಿಂದ ಶಾಲು ಹೊದಿಸಿ ಅಭಿನಂದಿಸಲಾಯಿತು.

ಕೆಸಿಎಫ್ ಎಚ್‌ವಿಸಿ 2019
ಕಳೆದ 5ವರ್ಷಗಳಿಂದ ಹಜ್ಜಾಜ್‌ಗಳ ಸೇವೆ ಮಾಡುವ ಕೆಸಿಎಫ್ ತಂಡವಾಗಿದೆ ಎಚ್‌ವಿಸಿ ಟೀಂ ಇದರ ಯಶಸ್ವಿಗಾಗಿ ನಿರಂತರವಾಗಿ ಪರಿಶ್ರಮಿಸಿದ ಎಚ್ ವಿ ಸಿ ರಾಷ್ಟ್ರೀಯ ಸಮಿತಿ ಕನ್ವಿನರ್ ಇಬ್ರಾಹಿಂ ಕಿನ್ಯ, ಮತ್ತು ಐದು ಝೋನ್ ಗಳಲ್ಲಿ ಎಚ್‌ವಿಸಿ ಗಾಗಿ ಉತ್ತಮ ಸೇವೆಗೈದ ಶಫೀಖ್ ಕಾಟಿಪಳ್ಳ( ದಮ್ಮಾಮ್), ಮೂಸ ಹಾಜಿ ಕಿನ್ಯಾ( ಜಿದ್ದಾ), ಹನೀಫ್ ಕಣ್ಣೂರು ( ರಿಯಾದ್), ಅಬ್ದುಲ್ ರಜಾಕ್ ಉಳ್ಳಾಲ್ ( ಮದೀನತುಲ್ ಮುನವ್ವರ)
ಅಬ್ದುಲ್ ಜಬ್ಬಾರ್ ( ಅಲ್ ಗಸೀಮ್)
ರವರನ್ನು ಅಭಿನಂದಿಸಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಂಘಟನಾ ಇಲಾಖೆ ಕಾರ್ಯದರ್ಶಿ ಬಶೀರ್ ತಲಪಾಡಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಕಿನ್ಯ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ