janadhvani

Kannada Online News Paper

ಸೇವಾ ಕೇಂದ್ರಗಳ ಗುಣಮಟ್ಟವನ್ನು ಪ್ರಕಟಿಸಿದ ದುಬೈ ಶೈಖ್

ದುಬೈ: ಯುಎಇಯಲ್ಲಿ ಉತ್ತಮ ಸೇವೆ ಮತ್ತು ಕಲಪೆ ಮಟ್ಟದ ಸೇವೆ ಸಲ್ಲಿಸುವ ಸರಕಾರಿ ಕಚೇರಿಗಳ ಪಟ್ಟಿಯನ್ನು ಹೊರಡಿಸಲಾಗಿದೆ.

ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ದೇಶಾದ್ಯಂತ ಆರುನೂರಕ್ಕೂ ಹೆಚ್ಚು ಸರಕಾರಿ ಸೇವಾ ಕೇಂದ್ರಗಳ ಸಮಗ್ರ ವರದಿಯನ್ನು ಪರಿಶೀಲಿಸಿದ ಬಳಿಕ ಶನಿವಾರ ಈ ಘೋಷಣೆ ಮಾಡಿದ್ದಾರೆ. ತಪ್ಪುಗಳನ್ನು ಸರಿಪಡಿಸಲು ಸ್ವಯಂ ಮೌಲ್ಯಮಾಪನ ಮಾಡುವುದು ಅಗತ್ಯ ಎಂದು ಅವರು ಹೇಳಿದರು.

ಶೈಖ್ ಅವರು ಈ ಹಿಂದೆ ದೇಶದ ಸರಕಾರಿ ಕಚೇರಿಗಳ ಕೆಲಸವನ್ನು ಮೌಲ್ಯಮಾಪನ ಮಾಡಿ ಕೆಟ್ಟ ಮತ್ತು ಒಳ್ಳೆಯದನ್ನು ಗುರುತಿಸುವುದಾಗಿ ಘೋಷಿಸಿದ್ದರು.ಸರಿಯಾಗಿ ಕಾರ್ಯನಿರ್ವಹಿಸದ ಸಂಸ್ಥೆಗಳ ನಿರ್ದೇಶಕರನ್ನು ತಕ್ಷಣ ಬದಲಾಯಿಸಲಾಗಿದೆ.ಬದಲಾಗಿ ಹೇಗೆ ಉತ್ತಮ ಸೇವೆ ನೀಡಬೇಕೆಂದು ತಿಳಿದಿರುವ ಜನರನ್ನು ಅಲ್ಲಿಗೆ ನೇಮಿಸಲಾಗಿದೆ ಎಂದು ಶೈಖ್ ಮುಹಮ್ಮದ್ ಹೇಳಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ಕಚೇರಿಗಳಲ್ಲಿರುವವರಿಗೆ ಬೋನಸ್ ಆಗಿ ಎರಡು ತಿಂಗಳ ವೇತನವನ್ನು ನೀಡಲಾಗುತ್ತದೆ.

ಉತ್ತಮ ಪ್ರದರ್ಶನ ನೀಡಿದ ಸಂಸ್ಥೆಗಳು

1. ಫೆಡರಲ್ ಅಥಾರಿಟಿ ಫೋರ್ ಐಡೆನ್ಟಿಟಿ ಆ್ಯಂಡ್ ಸಿಟಿಝನ್ಸಿಪ್ – ಫುಜೈರಾ ಕೇಂದ್ರ
2. ಶಿಕ್ಷಣ ಸಚಿವಾಲಯ – ಅಜ್ಮಾನ್ ಕೇಂದ್ರ
3. ಗೃಹ ಸಚಿವಾಲಯ – ಸಂಚಾರ ಮತ್ತು ಪರವಾನಗಿ ವಿಭಾಗ ಅಜ್ಮಾನ್ ಕೇಂದ್ರ
4. ಗೃಹ ಸಚಿವಾಲಯ – ವಾಸಿತ್ ಪೊಲೀಸ್ ಠಾಣೆ, ಶಾರ್ಜಾ
5. ಶೈಖ್ ಝಾಯಿದ್ ಹೌಸಿಂಗ್ ಪ್ರೋಗ್ರಾಂ, ರಾಸ್ ಅಲ್ ಖೈಮಾ ಕೇಂದ್ರ

ಕಳಪೆ ಪ್ರದರ್ಶನ ನೀಡಿದ ಸಂಸ್ಥೆಗಳು
1. ಎಮಿರೇಟ್ಸ್ ಪೋಸ್ಟ್ ಗ್ರೂಪ್, ಅಲ್ ಖಾನ್, ಶಾರ್ಜಾ ಸೆಂಟರ್
2. ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಝನ್ಶಿಪ್, ಅಲ್ ಮುಹೈಸಿನಾ ಸೆಂಟರ್ ಫಾರ್ ಪ್ರಿವೆಂಟಿವ್ ಮೆಡಿಸಿನ್, ದುಬೈ
3. ಸಾಮಾನ್ಯ ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ಪ್ರಾಧಿಕಾರ, ಶಾರ್ಜಾ ಕೇಂದ್ರ
4. ಸಮುದಾಯ ಅಭಿವೃದ್ಧಿ ಸಚಿವಾಲಯ, ಸಾಮಾಜಿಕ ವ್ಯವಹಾರ ಕಚೇರಿ ಅಬುಧಾಬಿ, ಬನಿಯಾಸ್ ಕೇಂದ್ರ
5. ಮಾನವ ಸಂಪನ್ಮೂಲ ಸ್ಥಳೀಯ ಅಭಿವೃದ್ಧಿ ಸಚಿವಾಲಯ, ಫುಜೈರಾ ಕೇಂದ್ರ

error: Content is protected !! Not allowed copy content from janadhvani.com