ಕುಂಬ್ರ ಮರ್ಕಝ್ ನಲ್ಲಿ ಅನಿವಾಸಿ ನಾಯಕರ ಸಂಗಮ

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಅನಿವಾಸಿ ಘಟಕಗಳ ನಾಯಕರ ಸಮಾವೇಶವು ಇತ್ತೀಚೆಗೆ ಕುಂಬ್ರ ಮರ್ಕಝ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಮದನಿ‌ ಅಲ್ ಹಾದಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಹಾಜಿ ಅಬ್ದುಲ್‌ ರಹ್ಮಾನ್ ಅರಿಯಡ್ಕ ಉದ್ಘಾಟಿಸಿದರು.

ಸಂಸ್ಥೆಯ ಇಪ್ಪತ್ತನೇ ವಾರ್ಷಿಕ ಕಾರ್ಯಕ್ರಮದ ಕಾರ್ಯಯೋಜನೆಗಳ ಚರ್ಚಾವೇದಿಕೆಯನ್ನು ಮರ್ಕಝುಲ್ ಹುದಾ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮುಹಮ್ಮದ್ ಫಾರೂಖ್ ಕನ್ಯಾನ ಉದ್ಘಾಟಿಸಿದರು

ಇಪ್ಪತ್ತನೆಯ ವಾರ್ಷಿಕದ ಅಂಗವಾಗಿ ವಿವಿಧ ರಾಷ್ಟ್ರೀಯ ಘಟಕಗಳಲ್ಲಿ ಹಮ್ಮಿ ಕೊಳ್ಳಬೇಕಾದ ಕಾರ್ಯಕ್ರಮಗಳಿಗೆ ಅಂತಿಮ ರೂಪ ಕೊಡಲಾಯಿತು.

ಈ ಸಂದರ್ಭದಲ್ಲಿ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮುಹಮ್ಮದ್ ಫಾರೂಖ್ ಕನ್ಯಾನ, ಯು.ಎ.ಇ. ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮುಹಮ್ಮದ್ ಶಕೂರ್ ಮಣಿಲ, ಕುವೈತ್ ಸಮಿತಿ ಕೋಶಾಧಿಕಾರಿ ಹೈದರ್ ಹಾಜಿ ಪಟ್ಟೋರಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸೌದಿ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷ ಹಾಜಿ ಅನ್ವರ್ ಹುಸೈನ್ ಗೂಡಿನಬಳಿ, ಉಪಾಧ್ಯಕ್ಷ ಅಬ್ದುಲ್ ಹಮೀದ್ ಸುಳ್ಯ, ಸಲಹೆಗಾರ ಅಬ್ದುಲ್ ಹಮೀದ್ ಅರಮೆಕ್ಸ್, ಯು.ಎ.ಇ.ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಕಮಾಲ್ ಅಜ್ಜಾವರ, ಕುವೈತ್ ಘಟಕದ ಇಬ್ರಾಹಿಂ ಕಾಯಾರ್, ಅಮೀರ್ ಮಲ್ಲೂರು ಮುಂತಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಸ್ವಾಗತಿಸಿ ಉಪಾಧ್ಯಕ್ಷ ಹಂಝ ಹಾಜಿ ಸಾಲ್ಮರ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!