janadhvani

Kannada Online News Paper

22 ವರ್ಷಗಳ ಹಿಂದೆ ದಫನ ಮಾಡಲಾದ ಮೃತದೇಹ ಅದೇ ರೂಪದಲ್ಲಿ ಪತ್ತೆ!

ಬಾಂದ (ಉತ್ತರ ಪ್ರದೇಶ): 22 ವರ್ಷಗಳ ಹಿಂದೆ ದಫನ ಮಾಡಲಾದ ವ್ಯಕ್ತಿಯೊಬ್ಬರ ಮೃತದೇಹವು ಯಾವುದೇ ಕುಂದು ಉಂಟಾಗದೆ, ದಫನ ಮಾಡಿದ ಅದೇ ರೂಪದಲ್ಲಿ ಇರುವುದು ಕಂಡು ಬಂದಿದೆ. ಉತ್ತರ ಪ್ರದೇಶದ ಬಾಬೆರು ಎಂಬಲ್ಲಿ ಈ ವಿದ್ಯಮಾನ ಕಂಡು ಬಂದಿದ್ದು, ಅದು ನಝೀರ್ ಅಹ್ಮದ್ ಎಂಬವರ ಮೃತದೇಹ ಎಂದು ಪತ್ತೆ ಹಚ್ಚಲಾಗಿದೆ.

ಭಾರೀ ಮಳೆಯಿಂದಾಗಿ ಗೋರಿ ಕುಸಿದ ಪರಿಣಾಮ, ದಫನ ಮಾಡಲಾದ ಮೃತದೇಹ ಹೊರಗೆ ಬಂದಿದೆ ಎನ್ನಾಲಾಗಿದ್ದು, ಬಳಿಕ ನಡೆಸಿದ ಪರಿಶೀಲನೆಯಲ್ಲಿ ಮೃತದೇಹಕ್ಕೆ ಯಾವುದೇ ಹಾನಿ ಸಂಭವಿಸದ ಬಗ್ಗೆ ಪತ್ತೆ ಹಚ್ಚಲಾಗಿತ್ತು. ಕುತೂಹಲಕಾರಿ ಘಟನೆಯನ್ನು ನೋಡುವ ಸಲುವಾಗಿ ಜನಜಂಗುಳಿ ಸೇರಿದ್ದು, ನಝೀರ್ ಅವರ ಸಂಬಂಧಿಕರು ಮೃತದೇಹವನ್ನು ದೃಢೀಕರಿಸಿದ್ದಾರೆ.

ನಂತರ ಹತ್ತಿರದಲ್ಲೇ ಬೇರೊಂದು ಗೋರಿ ಕೊರೆದು ಮೃತದೇಹವನ್ನು ದಫನ ಮಾಡಲಾಗಿತ್ತು, ಇದು ಅಲ್ಲಾಹನ ಅದ್ಬುತ ಎಂದು ಪರಿಸರವಾಸಿಗಳು ಬಣ್ಣಿಸಿದ್ದಾರೆ.

error: Content is protected !! Not allowed copy content from janadhvani.com