KCF ಬದಿಯ ಸೆಕ್ಟರ್: ಅನುಸ್ಮರಣೆ ಹಾಗೂ ಸ್ಟಡೀ ಕ್ಲಾಸ್ ಯಶಸ್ವಿ ಸಮಾಪ್ತಿ

KCF ಬದಿಯ ಸೆಕ್ಟರ್ ಕಾರ್ಯಕ್ರಮ ಇದರ ಮಾಸಿಕ ಮಹ್’ಳರತುಲ್ ಬದ್ರಿಯಾ ಸ್ವಲಾತ್ ಮಜ್ಲಿಸ್, ಶರಫುಲ್ ಉಲಮಾ ಮಂಜನಾಡಿ ಉಸ್ತಾದ್ ಅನುಸ್ಮರಣೆ, ಹಾಗೂ ದುಲ್ ಹಿಜ್ಜ ಮಾಸದ ಸ್ಟಡೀ ಕ್ಲಾಸ್ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಸೆಕ್ಟರ್ ಪ್ರ, ಕಾರ್ಯದರ್ಶಿ ಅಮೀರ್ ಕಲ್ಲಾಪು ಅವರ ನಿವಾಸ ವಾದಿ ಲಬನ್ ನಲ್ಲಿ ದಿನಾಂಕ 8/8/2019 ರಂದು ಶುಕ್ರವಾರ ರಾತ್ರಿ ಬದಿಯಃ ಸೆಕ್ಟರ್ ಅಧ್ಯಕ್ಷರಾದ ಹಮೀದ್ ಮುಲ್ಕಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕೆಸಿಎಫ್ ವಾದಿ ಲೆಬನ್ ಯುನಿಟ್ ಇದರ ಉಪಾಧ್ಯಕ್ಷರಾದ ಕರೀಂ ಮುಸ್ಲಿಯಾರ್ ಕೊಡಗು ರವರು ಸ್ವಲಾತ್ ಮಜ್ಲಿಸ್ ನೇತೃತ್ವ ನೀಡಿದರು. ಸಿದ್ದೀಕ್ ಸಖಾಫಿ ಕೇರಳ ರವರು ದುಆ ನೇತೃತ್ವ ನೀಡಿದರು ICF ಮುಖಂಡ ಸಿದ್ದೀಖ್ ಸಖಾಫಿ ಖಿರಾಅತ್ ಪಠಿಸಿದ ಸಭೆಯನ್ನು ದಾರುಲ್ ಅಷ್ಅರಿಯ್ಯ ಎಜುಕೇಶನ್ ಸೆಂಟರ್ ಇದರ ರಿಸೀವರ್ ಅಬ್ದುಲ್ಲಾ ಮದನಿ ವರು ಉಧ್ಘಾಟಿಸಿದರು.

KCF ಮುರೂಜ್ ಸೆಕ್ಟರ್ ಅಧ್ಯಕ್ಷರಾದ PK ದಾವೂದ್ ಸಅದಿ ಉರುವಾಲು ಪದವು ರವರು ದುಲ್ ಹಜ್ಜ್ ಮಾಸದ ಕುರಿತು ಹಾಗೂ ಅರಫಾ, ಪೆರ್ನಾಲ್, ಅಯ್ಯಾಮುತ್ತಶ್’ರೀಖ್ ದಿನಗಳ ಮಹತ್ವ, ಆಚರಣೆ ಹಾಗೂ ಉಳ್’ಹಿಯ್ಯತ್ ನ ಮಹತ್ವ ಕುರಿತು ಬಹಳ ಸಂಕ್ತಿಪ್ತವಾಗಿ ವಿವರಿಸಿದರು.

ಅಗಲಿದ ಮರ್ಹೂಂ ಶರಫುಲ್ ಉಲಮಾ ಮಂಜನಾಡಿ ಉಸ್ತಾದ್ ಸೇರಿದಂತೆ ಹಲವರ ಮೇಲೆ ಖುರ್ಆನ್ ಪಾರಾಯಣ ,ತಹ್ಲೀಲ್ , ಮಯ್ಯಿತ್ ನಮಾಜ್ ನಿರ್ವಹಿಸಲಾಯಿತು. ಕೆಸಿಎಫ್ ರಿಯಾದ್ ಝೋನ್ ಕೋಶಾಧಿಕಾರಿ ಉಮ್ಮರ್ ಹಾಜಿ ಅಳಕೆಮಜಲ್,ಹಾಗೂ ಯುನಿಟ್ ಮುಖಂಡರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮೂರು ಹೊಸ ಸದಸ್ಯತ್ವ ಸ್ವೀಕರಿಸಲಾಯಿತು.

ಅಬೂಬಕ್ಕರ್ ಸಖಾಫಿ ಸ್ವಾಗತಿಸಿ, ಯುನಿಟ್ ಅಧ್ಯಕ್ಷರಾದ ಅಬ್ದುಸ್ಸಲಾಂ ಸುಳ್ಯ ವಂದಿಸಿದರು.

✒ರಿಯಾ ನೆಲ್ಯಾಡಿ

Leave a Reply

Your email address will not be published. Required fields are marked *

error: Content is protected !!