ಕೆಸಿಎಫ್ ಒಮಾನ್ ಸ್ನೇಹೋಲ್ಲಾಸ ಕ್ಯಾಂಪ್

ಮಸ್ಕತ್: ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕೆಸಿಎಫ್ ಕಾರ್ಯಕರ್ತರಿಗಾಗಿ ದಿನಾಂಕ 12-08-2019, ಈದ್ ಉಳ್ ಅಝುಹಾ (ಬಕ್ರೀದ್ ಹಬ್ಬ) ದಿವಸ ಸ್ನೇಹ, ಉಲ್ಲಾಸ ಕ್ಯಾಂಪ್ ಬರ್ಕ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿರುವ ಝೋನ್ ಗಳ ನಡುವೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ಏರ್ಪಡಲಿದೆ. ಸಂಜೆ 5 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವು ಬೆಳಿಗ್ಗೆ 5 ಗಂಟೆಗೆ ಬುರ್ದಾ ಆಲಾಪನೆಯೊಂದಿಗೆ ಸಮಾಪ್ತಿಗೊಳ್ಳಲಿದೆ.

ಕೆಸಿಎಫ್ ಒಮಾನಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುವ ಈ ಕಾರ್ಯಕ್ರಮಕ್ಕೆ ನೂರರಷ್ಟು ಸದಸ್ಯರು ಇದೀಗಾಗಲೇ ತಮ್ಮ ಹೆಸರನ್ನು ನೊಂದಾಯಿಸಿದ್ದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ಮೂಡಿಸಲಿದೆ.

Leave a Reply

Your email address will not be published. Required fields are marked *

error: Content is protected !!