janadhvani

Kannada Online News Paper

ಕೆಸಿಎಫ್ ಅಲ್-ಐನ್ ಝೋನ್ ಸಮಿತಿಗೆ ನೂತನ ಸಾರಥ್ಯ.

ಅಲ್-ಐನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಲ್-ಐನ್ ಝೋನಿನ ವಾರ್ಷಿಕ ಮಹಾಸಭೆಯು ದಿನಾಂಕ 26-07-2019 ರಂದು ಶುಕ್ರವಾರ ಜುಮಾ ನಮಾಝಿನ ಬಳಿಕ ಕೆಸಿಎಫ್ ಕಛೇರಿಯಲ್ಲಿ ಝೋನ್ ಅಧ್ಯಕ್ಷರಾಗಿದ್ದಂತಹ ಮುಸ್ತಾಕ್ ತುಂಬೆಯವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮುಸ್ತಫಾ ಮುದುಂಗಾರ್ ಸ್ವಾಗತಿಸಿ, ಯುಎಇ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿ ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಮುಸ್ತಫಾ ಮುದುಂಗಾರ್ ಹಿಂದಿನ ಸಾಲಿನ ಸಂಪೂರ್ಣ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು.

ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷರಾದ ಜಲೀಲ್ ನಿಝಾಮಿ ಉಸ್ತಾದರು ಮುನ್ನುಡಿ ಭಾಷಣ ಮಾಡಿದರು.
ಚುನಾವಣಾಧಿಕಾರಿಯಾಗಿ ಆಗಮಿಸಿದ ಅಬ್ದುಲ್ ಹಮೀದ್ ಈಶ್ವರಮಂಗಿಲರವರು ಪ್ರಸ್ತುತ ಸಮಿತಿಯನ್ನು ಬರ್ಕಾಸ್ತುಗೊಳಿಸಿ ನೂತನ ಸಮಿತಿಗೆ ಚಾಲನೆ ನೀಡಿದರು.

ನೂತನ‌ ಸಮಿತಿಯ ಪದಾಧಿಕಾರಿಗಳು:

ಅಧ್ಯಕ್ಷರು: ಹಾಫಿಲ್ ಸಫ್ವಾನ್ ಸಖಾಫಿ
ಪ್ರಧಾನ ಕಾರ್ಯದರ್ಶಿ: ಮುಸ್ತಫಾ ಮುದುಂಗಾರ್ಕೋಶಾಧಿಕಾರಿ: ಮುಸ್ತಾಕ್ ತುಂಬೆ..ಸಂಘಟನಾ ವಿಭಾಗ
ಅಧ್ಯಕ್ಷರು: ಅಬ್ದುಲ್ ರಹೀಂ ಸಕಲೇಶ್’ಪುರ
ಕಾರ್ಯದರ್ಶಿ: ಹಂಝ ಕೊಡಗು,ಶಿಕ್ಷಣ ವಿಭಾಗ, ಅಧ್ಯಕ್ಷರು: ಉಸ್ಮಾನ್ ಸಖಾಫಿ.
ಕಾರ್ಯದರ್ಶಿ: ಮುನೀರ್ ಉಳ್ಳಾಲ.

ವೆಲ್ಫೇರ್ ವಿಭಾಗ
ಅಧ್ಯಕ್ಷರು: ಬಶೀರ್ ಬೈಕಂಪಾಡಿ
ಕಾರ್ಯದರ್ಶಿ: ಇಸ್ಮಾಯಿಲ್ ಕಂಬಳಬೆಟ್ಟು

ಆಡಳಿತ ವಿಭಾಗ
ಅಧ್ಯಕ್ಷರು: ಉಮರ್ ಕೊಪ್ಪ
ಕಾರ್ಯದರ್ಶಿ: ಇಮ್ತಿಯಾಝ್ ಬೈರಿಕಟ್ಟೆ.

ಇಹ್ಸಾನ್ ವಿಭಾಗ
ಅಧ್ಯಕ್ಷರು: ಇಬ್ರಾಹಿಂ ಉಳ್ಳಾಲ
ಕಾರ್ಯದರ್ಶಿ: ಫೈಝಲ್‌ ನಾಟೆಕಲ್

ಪಬ್ಲಿಕೇಷನ್ ವಿಭಾಗ
ಅಧ್ಯಕ್ಷರು: ಝಿಯಾದ್ ಉಳ್ಳಾಲ
ಕಾರ್ಯದರ್ಶಿ: ಅಶ್ರಫ್ ನಾಟೆಕಲ್

ನೂತನ ಸಮಿತಿಗೆ ಆಯಾ ವಿಭಾಗದ ನಾಯಕರ ಕೆಲಸ ಕಾರ್ಯಗಳ ಬಗ್ಗೆ ತರಗತಿ ನೀಡುವ ಬಗ್ಗೆ ರಾಷ್ಟ್ರೀಯ ಸಮಿತಿ ಆಯೋಜಿಸಿದಂತಹ ಖವಾಯಿದ- 2019 ನ್ನು ಕೆಸಿಎಫ್ ಅಂತರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿಎಂಎಚ್ ಹಮೀದ್ ಈಶ್ವರಮಂಗಿಲರವರು ನೆರವೇರಿಸಿದರು.

ನೂತನ ಸಮಿತಿಗೆ ರಾಷ್ಟ್ರೀಯ ನಾಯಕರಾದ ಇಬ್ರಾಹಿಂ ಬ್ರೈಟ್ ಮಾರ್ಬಲ್, ಮೂಸಾ ಹಾಜಿ ಬಸರ, ಶಾಹುಲ್‌ ಹಮೀದ್ ಸಖಾಫಿ, ಅಬ್ದುಲ್ ರಹೀಂ ಕೋಡಿ, ಶಾಫಿ ಸಖಾಫಿ ಕೊಂಡಂಗೇರಿ, ರಫೀಕ್ ಕಲ್ಲಡ್ಕ ಶುಭಹಾರೈಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಗೊಂಡ ಮುಸ್ತಫಾ ಮುದುಂಗಾರ್ ಧನ್ಯವಾದವಿತ್ತರು.
ನೂತನ‌ ಅಧ್ಯಕ್ಷರಾಗಿ ಆಯ್ಕೆಯಾದ ಸಫ್ವಾನ್ ಸಖಾಫಿಯವರ ದುವಾ ಹಾಗೂ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.