ಮಂಗಳೂರು: ಹಿರಿಯ ವಿದ್ವಾಂಸ ಅಲ್ ಮದೀನ ಸಂಸ್ಥೆಯ ಶಿಲ್ಪಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮರಣ ವಾರ್ತೆ ಕೇಳಿ ತೀವ್ರ ಧು:ಖಿತನಾದೆ, ಅವರ ವಿಯೋಗ ಸಮಾಜಕ್ಕೆ ತುಂಬಲಾರದ ನಷ್ಟ. ಹುಟ್ಟೂರು ಕೊಡಗು ಆದರೂ ತನ್ನ ಸೇವೆಗೆ ಕರಾವಳಿ ಭಾಗವನ್ನು ಆಯ್ಕೆ ಮಾಡಿದ ಶೈಖುನಾರವರು ಮುಸ್ಲಿಂ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ.
ಸುಮಾರು 25 ವರ್ಷಗಳ ಹಿಂದೆ ಈ ಸಮಾಜದಲ್ಲಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಯತೀಂ ಮಕ್ಕಳಿಗೆ ವಸತಿ ಸೌಕರ್ಯದೊಂದಿಗೆ ಗುಣಮಟ್ಟದ ಉಭಯ ಶಿಕ್ಷಣ ನೀಡಿ ಬೆಳೆಸಬೇಕೆಂಬ ಉದ್ದೇಶದೊಂದಿಗೆ ಆರಂಭಿಸಿದ ಅಲ್ ಮದೀನಾ ಎಂಬ ಸಂಸ್ಥೆ, ಶೈಖುನಾರವರು ಈ ಉಮ್ಮತ್ ಗೆ ನೀಡಿದ ಮಹಾ ಕೊಡುಗೆಯಾಗಿದೆ, ಇಂದು ಆ ಸಂಸ್ಥೆ ಬೆಳೆದು ಹೆಮ್ಮರವಾಗಿದೆ,ದೇಶ ವಿದೇಶಗಳಲ್ಲಿ ಅದರ ಕೀರ್ತಿ ಹಬ್ಬಿದೆ.
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ನ ಎಲ್ಲಾ ಕಾರ್ಯಕ್ರಮಗಳಿಗೂ ಉಸ್ತಾದರು ನೀಡಿದ ಸಹಾಯ ಸಹಕಾರ ಮತ್ತು ಪ್ರೋತ್ಸಾಹ ಎಂದೂ ಮರೆಯಲು ಸಾಧ್ಯವಿಲ್ಲ.ಅಲ್ಲಾಹು ಅವರ ಪದವಿಯನ್ನು ಉನ್ನತಿಗೇರಿಸಲಿ….ಎಂದು ಪ್ರಾರ್ಥಿಸುತ್ತಾ ಅವರ ವಿಯೋಗಕ್ಕೆ ಸಂತಾಪ ಸೂಚಿಸುವೆನು ಮೃತರ ಹೆಸರಿನಲ್ಲಿ ಮಯ್ಯಿತ್ ನಮಾಜು ನಿರ್ವಹಿಸಿ, ಖುರ್ ಆನ್ ಪಾರಾಯಣದೊಂದಿಗೆ ಪ್ರತ್ಯೇಕ ಪ್ರಾರ್ಥನೆ ನಡೆಸಲು ಈ ಮೂಲಕ ವಿನಂತಿಸುತ್ತೇನೆ.
ಆತೂರು ಸಅದ್ ಮುಸ್ಲಿಯಾರ್
(ಅಧ್ಯಕ್ಷರು ಎಸ್ ಜೆ ಎಂ ಕರ್ನಾಟಕ)















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ