ಬೆಳ್ತಂಗಡಿ : ಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF) ಬೆಳ್ತಂಗಡಿ ಇದರ 2019-20 ನೇ ಸಾಲಿನ ಅರ್ಧ ವಾರ್ಷಿಕ ಮಹಾಸಭೆಯು 25 ಜುಲೈ 2019 ರಂದು ಮಗ್ರಿಬ್ ನಮಾಝಿನ ಬಳಿಕ ಡಿವಿಷನ್ ಅಧ್ಯಕ್ಷರಾದ ಬಹು|ಅಯ್ಯೂಬ್ ಮಹ್ಲರಿ ಕಾವಳಕಟ್ಟೆ ಇವರ ಘನ ಅಧ್ಯಕ್ಷತೆಯಲ್ಲಿ ಸುವರ್ಣ ಆರ್ಕೇಡ್ ಬೆಳ್ತಂಗಡಿಯಲ್ಲಿ ನಡೆಯಿತು.
ಅಯ್ಯೂಬ್ ಮಹ್ ಲರಿ ಉಸ್ತಾದ್ ರವರ ದುಆದೊಂದಿಗೆ ಡಿವಿಷನ್ ಉಪಾಧ್ಯಕ್ಷರಾದ ಕರೀಂ ಸಖಾಫಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಡಿವಿಷನ್ ಉಸ್ತುವಾರಿ, ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ ,ಜಿಲ್ಲಾ ನಾಯಕರಾದ ಹಕೀಂ ಕಲೈಂಜಿಬೈಲು ಹಾಗೂ ಮುಸ್ತಫ ಉರುವಾಲುಪದವು ವೀಕ್ಷಕರಾಗಿ ಆಗಮಿಸಿದ್ದರು.

ಮುಸ್ತಫ ಉರುವಾಲುಪದವು ಇವರು ಸಭೆಗೆ ಶುಭಾಶಯ ಕೋರಿ ಮಾತನಾಡಿದರು.ಬಳಿಕ ರಶೀದ್ ಹಾಜಿ ವಗ್ಗ ಇವರು ಸಂಘಟನಾ ತರಗತಿ ನಡೆಸಿಕೊಟ್ಟರು.
ಡಿವಿಷನ್ ಪ್ರ.ಕಾರ್ಯದರ್ಶಿ ಶರೀಫ್ ನಾವೂರು ರವರು ವರದಿ ಹಾಗೂ ಕೋಶಾಧಿಕಾರಿ ಬಹು|ನಝೀರ್ ಮದನಿ ಉಸ್ತಾದ್ ರವರು ಲೆಕ್ಕಪತ್ರ ಮಂಡಿಸಿದರು.ತದನಂತರ ವೀಕ್ಷಕರ ನೇತೃತ್ವದಲ್ಲಿ ಸಮಿತಿಯ ಕಾರ್ಯಾಚರಣೆಯ ಅವಲೋಕನ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನಾಯಕರಾದ ಇಕ್ಬಾಲ್ ಮಾಚಾರು, ಶರೀಫ್ ಬೇರ್ಕಳ ಹಾಗೂ ಡಿವಿಷನ್ ನಾಯಕರು ಉಪಸ್ಥಿತರಿದ್ದರು.
ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ ಸ್ವಾಗತಿಸಿ, ಕಾರ್ಯದರ್ಶಿ ತೌಫೀಕ್ ವೇಣೂರು ವಂದಿಸಿದರು.
ವರದಿ:ಎಂ.ಎಂ.ಉಜಿರೆ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ