ಬೆಳ್ಳಾರೆ : ಅನಿವಾಸಿ ಕನ್ನಡಿಗರ ಮನೆಮಾತಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಅನೇಕ ಸಾರ್ವಜನಿಕ , ಸಾಮಾಜಿಕ , ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಉನ್ನತಿಗಾಗಿ ಕಳೆದ 6 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದು, ಇದರ ಭಾಗವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಮತ್ತು ಕರ್ನಾಟಕದಲ್ಲಿ ಹಲವಾರು ಜನಪರ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ.

ಜನಸಾಮಾನ್ಯರ ಮೂಲಭೂತ ಅಗತ್ಯವಾದ ಕುಡಿಯುವ ನೀರಿನ ಬಗ್ಗೆ ಬೆಳ್ಳಾರೆ ಗ್ರಾಮದ ಬಂಡಿಮಜಲು ಎಂಬ ಪ್ರದೇಶದಲ್ಲಿ ವಾಸಿಸುವ ಸುಮಾರು 13 ಕುಟುಂಬಗಳ
ಮನವಿ ಲಭಿಸಿದಾಗ ಅದಕ್ಕೆ ಸ್ಪಂದಿಸಿದ KCF ಸೌದಿ ರಾಷ್ಟೀಯ ಸಮಿತಿಯ ಅಧೀನದಲ್ಲಿರುವ ಅಲ್ ಕಸೀಮ್ ಝೋನ್, ಸುಮಾರು 1 ಲಕ್ಷದ 15 ಸಾವಿರ ವೆಚ್ಚದಲ್ಲಿ ಬೋರ್ವೆಲ್ ಮತ್ತು ಪಂಪ್ ಸೆಟ್ ವ್ಯವಸ್ಥೆಯನ್ನು ಕಲ್ಪಿಸಿ, ಅದರ ಉದ್ಘಾಟನೆಯನ್ನು ದಿನಾಂಕ 26 -07 -2019 ರಂದು ನಡೆಸಲಾಯಿತು.

KCF ಅಲ್ ಕಸೀಮ್ ಝೋನ್ ನಿಕಟಪೂರ್ವ ಅಧ್ಯಕ್ಷರಾದ ಯಾಕೂಬ್ ಸಖಾಫಿ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಅಲ್ ಹಾಜಿ ಹಸ್ಸನ್ ಸಖಾಫಿ ಅಧ್ಯಕ್ಷರು, ದಾರುಲ್ ಹಿಕ್ಮ ವಿದ್ಯಾಸಂಸ್ಥೆ ಬೆಳ್ಳಾರೆ,
ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮುಸ್ತಫಾ ಬೆಳ್ಳಾರೆ , ಸದಸ್ಯರಾದ ಆರಿಫ್ ಇಂಜಿನಿಯರ್, KCF ನಾಯಕರಾದ ಹಬೀಬ್ ರಹ್ಮಾನ್ ಅಡ್ಡೂರ್, ಮುಹ್ಯುದ್ದೀನ್ ಸಅದಿ, ಜಲಾಲುದ್ದೀನ್ ಬಾ ಅಹ್ಸನಿ, ಫೈಸಲ್ ಮಠ, ಇರ್ಷಾದ್ ಸಚ್ಚರಿಪೇಟೆ, ಹನೀಫ್ ಬೆಳ್ಳಾರೆ,
ಹನೀಫ್ ಬಿಸ್ಮಿಲ್ಲಾ , ಫಾರೂಕ್ ಸಿದ್ದಕಟ್ಟೆ , ಶುಕೂರ್ ಪಕಲಡ್ಕ , ಸಾದಿಕ್ ಸುಳ್ಯ, ಹುಸೈನ್ ಸಖಾಫಿ ಇಂದ್ರಾಜೆ, SYS ನಾಯಕರಾದ ಮಹಮೂದ್ ಬೆಳ್ಳಾರೆ , ಹಮೀದ್ ಆಲ್ಫಾ, ಮುಸ್ತಾಫಾ ಮಾಸ್ತಿಕಟ್ಟೆ ,ಹನೀಫ್ ಹಾಜಿ ಇಂದ್ರಾಜೆ , ಸುಲೈಮಾನ್ ಆಲ್ಫಾ ಊರಿನ ನಾಗರಿಕರು , SYS ಮತ್ತು SSF ನಾಯಕರು, ಕಾರ್ಯಕರ್ತರು ಭಾಗವಹಿಸಿದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ