ವಿರಾಜಪೇಟೆ: SSF ಕರ್ನಾಟಕ ರಾಜ್ಯ ಸಮಿತಿ ನಿರ್ದೇಶಿಸಿದಂತೆ ವಿರಾಜಪೇಟೆ ಡಿವಿಷನ್ ಮಟ್ಟದ ಅರ್ಧ ವಾರ್ಷಿಕ ಸಭೆಯು ದಿನಾಂಕ:25-07-2019 ರಂದು ಗುಂಡಿಗರೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಡಿವಿಷನ್ ಅಧ್ಯಕ್ಷರಾದ ಝುಬೈರ್ ಸಅದಿ ಉಸ್ತಾದ್ ಅಧ್ಯಕ್ಷತೆ ವಹಿಸಿದರು. ಗುಂಡಿಗರೆ ಮಹಲ್ ಖಾಝಿ ಅಝೀಝ್ ಸಖಾಫಿ ಉಸ್ತಾದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸ್ವಾಗತ ಭಾಷಣವನ್ನು ಡಿವಿಷನ್ ಕಾರ್ಯದರ್ಶಿ ಯೂಸುಫ್ ಝೈನಿ ಉಸ್ತಾದ್ ನಡೆಸಿದರು.ಗುಂಡಿಗರೆ ಮಹಲ್ ಅಧ್ಯಕ್ಷರಾದ ಅಬ್ಬಾಸ್ ಸಾಹೇಬ್ ರವರು ಸಂಘಟನೆಯನ್ನು ಶ್ಲಾಘಿಸಿದರು.
SSF ಕೊಡಗು ಜಿಲ್ಲಾ ಸಮಿತಿಯಿಂದ ಮುಜೀಬ್ ಕೊಂಡಂಗೇರಿ ಮತ್ತು ರಫೀಕ್ ಲತೀಫೀ ಉಸ್ತಾದ್ ರವರು ವೀಕ್ಷಕರಾಗಿ ಆಗಮಿಸಿದ್ದರು.
ಡಿವಿಷನ್ ಕಾರ್ಯದರ್ಶಿ ಯೂಸುಫ್ ಝೈನಿ ಉಸ್ತಾದ್ ಮತ್ತು SSF ವಿರಾಜಪೇಟೆ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ನಿಜಾಂ ಮಟ್ಟಂ ರವರು ವರದಿ ಮಂಡಿಸಿದರು. ಖಾತೆ ವಿವರಗಳನ್ನು ಕೋಶಾಧಿಕಾರಿ ಜಲೀಲ್ ಅಮೀನಿ ಉಸ್ತಾದ್ ರವರು ವಿವರಿಸಿದರು.

SSF ಕೊಡಗು ಜಿಲ್ಲಾ ಸಮಿತಿ ಸದಸ್ಯರಾದ ರಫೀಕ್ ಲತೀಫೀ ಉಸ್ತಾದ್ ಮುಜೀಬ್ ಕೊಂಡಂಗೇರಿ ರವರು SSF ಸಂಘಟನೆ ಬಗ್ಗೆ ತರಗತಿಯನ್ನು ನಡೆಸಿಕೊಟ್ಟರು.ಝುಭೈರ್ ಸಅದಿ ಉಸ್ತಾದ್ ರವರು ಉಪದೇಶ ನೀಡಿದರು.
SSF ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಫೀಕ್ ನೆಲ್ಯಾಹುದಿಕೇರಿ, SSF ಕೊಡಗು ಜಿಲ್ಲಾ ಸಮಿತಿಯಿಂದ ಹಾರಿಸ್ ಸಖಾಫಿ ನೆಲ್ಯಾಹುದಿಕೇರಿ, ನಿಸಾರ್ ಸಖಾಫಿ ಕಡಂಗ, ಶಕೀರ್ ಮಾಸ್ಟರ್ ಪೊನ್ನತ್ಮಟ್ಟ, ಉಬೈದ್ ಗುಂಡಿಗರೆ, ಸಿದ್ದೀಕ್ ಸಿದ್ದಾಪುರ, ಜುನೈದ್ ಅಮ್ಮತಿ, ರಝ್ಝಾಖ್ ಸಅದಿ ಉಸ್ತಾದ್ ಮತ್ತು ಹಲವು ಗಣ್ಯರು ಹಾಗೂ ವಿವಿಧ ಸೆಕ್ಟರ್ಗಳಿಂದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ